ವಿವಿಧ ಪ್ರಕರಣದಲ್ಲಿ 1.37 ಕೋಟಿ ಜಫ್ತು: ಎಸ್ಪಿ ನಿಂಬರಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 21 :
ವಿವಿಧ ಸೈಬರ್ ಪ್ರಕರಣ, ಸರ್ಕಾರಿ ಯೋಜನೆ ದುರಪಯೋಗ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 1,32,38, 183 ಕೋಟಿ ರೂ. ಹಣವನ್ನು ಜಪ್ತು ಮಾಡಿಕೊಳ್ಳುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಎಲ್ಲ ಪ್ರಕರಣದಲ್ಲಿ ಬಳಕೆಯಾಗಿದ್ದ ಸುಮಾರು 2.40 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ಸಹ ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವಿವರಣೆ ನೀಡಿದರು.
ಸೈಬರ್ ಪ್ರಕರಣಗಳು ಸೇರಿದಂತೆ ವಿವಿಧ ತೆರನಾದ ಪ್ರಕರಣವನ್ನು ಬೇಧಿಸುವಲ್ಲಿ ನಮ್ಮ ಪೊಲೀಸ್ ತಂಡ ಯಶಸ್ವಿಯಾಗಿದೆ
ಕೋಟ್ಯಂತರ ರೂ. ಮೌಲ್ಯದ ನಗದನ್ನು ನೊಂದ ದೂರುದಾರರಿಗೆ ಮರಳಿಸಲಾಗಿದೆ ಎಂದು ಹೇಳಿದರು.

ಟ್ರೇಡಿಂಗ್ ಹೆಸರಿನಲ್ಲಿ ಮೋಸ : 65.64 ಲಕ್ಷ ರೂ. ಜಪ್ತಿ

ವಿಜಯಪುರ ನಗರದ ವ್ಯಾಪಾರಿಯೊಬ್ಬರಿಗೆ ದಿ ಓಕ್ಟಾ ಟ್ರೇಡಿಂಗ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ನಂಬಿಸಿ 2,04,71,500 ಕೋಟಿ ಹಣವನ್ನು ಹಾಕಿಸಿಕೊಂಡಿದ್ದರು. ನಂತರ ಲಾಭಾಂಶವನ್ನೂ ಕೊಡದೇ ವಂಚನೆ ಮಾಡಿದ್ದರು. ಈ ವಿಷಯವಾಗಿ ಪ್ರಕರಣವನ್ನು ದಾಖಲಿಸಿಕೊಂಡು ವಂಚನೆ ಮಾಡಿದ ಎಲ್ಲ ಆರೋಪಿಗಳ ಅಕೌಂಟ್ ಫ್ರೀಜ್ ಮಾಡಲಾಗಿತ್ತು, ಈ ಹಿಂದೆ ಇದೇ ಪ್ರಕರಣದಲ್ಲಿ 70 ಲಕ್ಷ ರೂ.ಗಳನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು, ಈಗ ಪುನ: 65.64 ಲಕ್ಷ ರೂ.ಗಳನ್ನು ದೂರುದಾರರಿಗೆ ಜಮಾ ಮಾಡಲಾಗಿದ್ದು, ಈ ಪ್ರಕರಣದಲ್ಲಿ ನೊಂದ ದೂರುದಾರರಿಗೆ 1,35,06,400 ಕೋಟಿ ರೂ. ಜಮಾವಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಂಬರಗಿ ವಿವರಿಸಿದರು.

ಮದುವೆಯಾಗುವುದಾಗಿ ನಂಬಿಸಿ ಕೋಟಿ ಲೂಟಿ : ಹಣ ಜಪ್ತಿ

ಡಿವೋರ್ಸ್ ಮ್ಯಾಟ್ರಿಮನಿ ಮೂಲಕ ವೈದ್ಯರೊಬ್ಬರಿಗ ಪರಿಚಯ ಮಾಡಿಕೊಂಡು, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅವರಿಂದ ಎಂ.ಬಿಟ್‌ಕಾಯಿನ್.ವಿಟಿ.ಕಾಮ್ ನಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ಲಾಭಾಂಶ ಮಾಡಿ ದೂರುದಾರರ ಸಾಲ ತೀರಿಸುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಂಚಿತರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು 25.11 ಲಕ್ಷ ರೂ. ಆರೋಪಿತರಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಬರಗಿ ವಿವರಿಸಿದರು.
ಸರ್ಕಾರಿ ಚೆಕ್ ದುರಪಯೋಗ
ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಅಂದಿನ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ ಅವರಿಂದಲೂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 25,55,183 ಲಕ್ಷ ರೂ.ಗಳನ್ನು ಸರ್ಕಾರದ ಖಾತೆಗೆ ಜಮಾ ಮಾಡಲಾಗಿದೆ ಎಂದು ಎಸ್.ಪಿ. ನಿಂಬರಗಿ ತಿಳಿಸಿದರು.
ಈ ಪ್ರಕರಣದ ವಿವರಣೆ ನೀಡಿದ ಅವರು, ಕಳೆದ 2018 ಡಿಸೆಂಬರ್ 10ರಂದು 75,90 ಲಕ್ಷ ರೂ.ಗಳನ್ನು ಅದರಲ್ಲಿ 37.95 ಲಕ್ಷ ರೂ.ಗಳನ್ನು ಡಾ.ಅಂಬೇಡ್ಕರ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ಭೂ ಒಡೆತನ ಯೋಜನೆ ಹೆಸರಿನಲ್ಲಿರುವ ಇಂಡಿಯನ್ ಬ್ಯಾಂಕ್ ವಿಜಯಪುರ ಶಾಖೆಯ ಕ್ರಾಸ್ ಚೆಕ್‌ ಅನ್ನು ಡಾ.ಅಂಬೇಡ್ಕರ ಅಭಿವೃದ್ಧಿ ನಿಗಮದ ಕಾರ್ಯಾಲಯಕ್ಕೆ ಕೊಟ್ಟು 2019ರ ಜ.23 ರಂದು 3,79,500 ಲಕ್ಷ ಹಾಗೂ 2019 ರ ಜ.28 ರಂದು 34.15 ಲಕ್ಷ ರೂ.ಗಳನ್ನು ಬೆಂಗಳೂರು ನಗರದ ಕನ್ನಿಂಗ್ ಹ್ಯಾಂ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಭೂ ಒಡೆತನ ಯೋಜನೆ ಹೆಸರಿನಲ್ಲಿರುವ ಖಾತೆಯಿಂದ ಹಣ ಆರ್‌ಟಿಜಿಎಸ್ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದು, ಈ ಪ್ರಕರಣದಲ್ಲಿ 27,55,183 ಲಕ್ಷ ರೂ. ಹಣವನ್ನು ಜಪ್ತು ಮಾಡಿಕೊಂಡು ನ್ಯಾಯಾಲಯಕ್ಕೆ ವರದಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಸುನೀಲ ಕಾಂಬಳೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share this