ಸಪ್ತಸಾಗರ ವಾರ್ತೆ,ವಿಜಯಪುರ, ಏ. 4: ಅನವಶ್ಯಕವಾಗಿ ಕುಡಿಯುವ ನೀರು ಪೋಲು ಮಾಡುವರಿಗೆ 2 ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಳ್ಳುವ ಹಾಗೂ ಪಡೆದುಕೊಂಡವರಿಗೆ ಹೊಸ ನಳದ ಶುಲ್ಕದ ಜೊತೆಗೆ ಹೆಚ್ಚುವರಿ 5 ಸಾವಿರ ರೂ. ದಂಡ ವಿಧಿಸಲಾಗುವುದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರದ ವಿವಿಧ ವಲಯ, ವಾರ್ಡಗಳಲ್ಲಿ ಪೂರೈಕೆಯಾಗುವ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಪರಿಗಣಿಸಿ ನೀರಿನ ಪ್ರಮಾಣವನ್ನು ಅಂದಾಜಿಸಲಾಗಿರುತ್ತದೆ.
ದಿನಂಪ್ರತಿ ಪ್ರತಿಯೊಬ್ಬರಿಗೆ ತಲಾ 135 ಲೀಟರನಂತೆ ಪ್ರತಿ ಮನೆಯಲ್ಲಿ ಒಟ್ಟು 5 ಜನರ ಬೇಡಿಕೆಯನ್ನಾಧರಿಸಿ ನೀರು ಪೂರೈಸಲಾಗುತ್ತಿದೆ.
ಆದರೆ ಸಾರ್ವಜನಿಕರು ಈ ಪ್ರಮಾಣ ಮೀರಿ ವಾಹನ ತೊಳೆಯುವುದು, ಗಾರ್ಡನಗಳಿಗೆ ನೀರುಣಿಸುವುದು. ಅನವಶ್ಯಕವಾಗಿ ನಳದ ನೀರನ್ನು ಬಂದ್ ಮಾಡದೇ ರಸ್ತೆಗೆ, ಹೊರಚರಂಡಿಗೆ ಫೋಲು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕೆಲವೆಡೆ ಪವರ್ ಪಂಪ್ ಅಳವಡಿಸಿ. ಹೆಚ್ಚಿನ ನೀರು ಬಳಸುತ್ತಿದ್ದು, ಇದರಿಂದಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಇದನ್ನು ತಡೆಗಟ್ಟಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾದರಿಯಂತೆ 30-12-2025 ರಂದು ಮಹಾನಗರಪಾಲಿಕೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅನವಶ್ಯಕವಾಗಿ ಕುಡಿಯುವ ನೀರು ಪೋಲು ಮಾಡುವರಿಗೆ 2 ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಳ್ಳುವ ಹಾಗೂ ಪಡೆದುಕೊಂಡವರಿಗೆ ಹೊಸ ನಳದ ಶುಲ್ಕದ ಜೊತೆಗೆ ಹೆಚ್ಚುವರಿ 5 ಸಾವಿರ ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಹಾಗಾಗಿ ಸಾರ್ವಜನಿಕರು ನೀರು ಪೋಲು ಮಾಡದೇ ಮಿತವಾಗಿ ಬಳಕೆ ಮಾಡಬೇಕು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


