ಸಪ್ತಸಾಗರ ವಾರ್ತೆ ವಿಜಯಪುರ,ಡಿ. 7 : ದಿವಟಗೇರಿ ಗಲ್ಲಿಯ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಮಠಕ್ಕೆ 50 ವಸಂತಗಳ ಸಂಭ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು. ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶ್ರೀಮಠಕ್ಕೆ ಭೇಟಿ ನೀಡಿ ರಾಯರ ಪವಿತ್ರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದರು.
ಅದಕ್ಕೂ ಮೊದಲು ಬೆಳಿಗ್ಗೆ 8 ಗಂಟೆಗೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ಪೂರ್ಣ ಕುಂಭ ಸ್ವಾಗತಿಸಲಾಯಿತು. ನಂತರ ಪಂಚಾಮೃತ ಅಭಿಷೇಕ, ಸಾವಿರಾರು ಭಕ್ತರಿಗೆ ಮುದ್ರಾಧಾರಣ, ಹೋಮದ ಪೂರ್ಣಾಹುತಿ ಕಾರ್ಯಕ್ರಮ ಜರುಗಿತು.
ನಂತರ ಮೂಲರಾಮದೇವರ ಪೂಜೆ, ಸಾವಿರಾರು ಜನರಿಗೆ ತೀರ್ಥ ಪ್ರಸಾದ, ಫಲಮಂತ್ರಾಕ್ಷತೆ ಭಕ್ತಾಧಿಗಳಿಗೆ ನೀಡಿ ಹರಸಿದರು.
ಈ ಸಂದರ್ಭದಲ್ಲಿ ಪಂ.ಮಧ್ವಾಚಾರ ಮೊಕಾಶಿ, ಸಂಜೀವಾಚಾರ್ಯ ಮದಭಾವಿ, ಶ್ರೀನಿವಾಸ ಆಚಾರ್ಯ ಗೋಠೆ, ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೆಟಗೇರಿ, ವಿಜಯ ಜೋಶಿ, ಕೃಷ್ಣ ಗನ್ಹಾಳಕರ, ಕೃಷ್ಣಾ ಕುಲಕರ್ಣಿ, ಗೋವಿಂದ ದೇಶಪಾಂಡೆ, ಉಪೇಂದ್ರ ದೇಸಾಯಿ, ಪ್ರವೀಣ ಮಂಕಣಿ, ಅಂಭಾದಾಸ ಜೋಶಿ, ಶ್ರೀಪಾದ ಗಾಯಿ, ಗೋವಿಂದ ಜೋಶಿ, ಅಜೀತ್ ಆಚಾರ್ಯ ಹನಗಂಡಿ, ವಿಕಾಸ ಪದಕಿ, ರಾಕೇಶ ಕುಲಕರ್ಣಿ, ಬಿಂದುಮಾಧವ್ ಯಂಡಿಗೇರಿ, ಸಂಜು ದಿವಾಣಜಿ, ಜ್ಞಾನೇಶ ಕುಲಕರ್ಣಿ, ಪವನ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 50 ವಸಂತಗಳ ಸಂಭ್ರಮ


