ವಿಜಯಪುರ ಜಿಲ್ಲೆಯಲ್ಲಿ ಹೊಸ ರೈಲು ಮಾರ್ಗ: ಸಂಸದ ರಮೇಶ ಜಿಗಜಿಣಗಿ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 24:
ಸಂಸದ ರಮೇಶ ಜಿಗಜಿಣಗಿ ಅವರು
ದೆಹಲಿಯಲ್ಲಿ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಹೊಸ ರೈಲು ಮಾರ್ಗಗಳ ಸ್ಥಾಪನೆಗೆ ಮನವಿ ಮಾಡಿಕೊಂಡರು. ಆಲಮಟ್ಟಿ- ಇಲಕಲ್ -ಕೊಪ್ಪಳದಿಂದ ಚಿತ್ರದುರ್ಗವರೆಗೆ ಹೊಸ ರೈಲ್ವೆ ಮಾರ್ಗವನ್ನು ಮಾಡುವಂತೆ ಸುಧೀರ್ಘವಾಗಿ ಚರ್ಚಿಸಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಹಾಗೂ ವಿ. ಸೋಮಣ್ಣ ಮತ್ತು ಬಾಗಲಕೋಟೆ ಜಿಲ್ಲೆಯ ಸಂಸದ
ಪಿ. ಸಿ. ಗದ್ದಿಗೌಡರ ಅವರು ಸೇರಿದಂತೆ ಆಲಮಟ್ಟಿ, ಇಲಕಲ್ ಮತ್ತು ಕೊಪ್ಪಳದಿಂದ ಆಗಮಿಸಿದ ಕಾರ್ಯಕರ್ತರು ಉಪಸ್ಥಿತರಿದ್ದರು.

Share