ಸಪ್ತಸಾಗರ ವಾರ್ತೆ, ವಿಜಯಪುರ, ಜು. 24:
ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾಆಗ ಅಂಗಸಂಸ್ಥೆಯಾದ ರಾಜ್ಯ ಯೋಗಾಸನ ಕ್ರೀಡಾ ಸಂಸ್ಥೆ, ಜಿಲ್ಲಾ ಹಾಗೂ ರಾಜ್ಯ ಮತು ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ನಿಮಿತ್ತ ಆಗಸ್ಟ್ 3ರಂದು ವಿಜಯಪುರ ತಾಲೂಕಿನ ತಿಡಗುಂದಿಯ ಮಾನಸ ಗಂಗೋತ್ರಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಯೋಗಾಸನಗಳು ಈಗ ಒಲಿಂಪಿಕ್ಸ್ ಅಂಗಳಕ್ಕೂ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಸ್ಪರ್ಧೆ ಮುಂದಿನ ಮಟ್ಟಗಳಿಗೆ ದಾರಿ ತೆರೆದುಕೊಡಲಿದೆ ಎಂದು ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಬಸನಗೌಡ ಹರನಾಳ ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಯೋಗಾಸನ ಸ್ಪರ್ಧೆ ಪ್ರಾರಂಭವಾಗಲಿದೆ. ಸಬ್-ಜೂನಿಯರ್ 10 ರಿಂದ 14 ವಯೋಮಿತಿಯವರಿಗಾಗಿ,
ಜೂನಿಯರ್ 14 ರಿಂದ 18, ಸೀನಿಯರ್ 18 ರಿಂದ28, ಸೀನಿಯರ್ 28 ರಿಂದ35,
ಸೀನಿಯರ್ 35 ರಿಂದ45, ಸೀನಿಯರ್ 45 ರಿಂದ55 ವಯೋಮಿತಿಯವರಿಗೆ ಸ್ಪರ್ಧೆಗಳು ನಡೆಯಲಿವೆ.
ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಯೋಗಾಸನ, ಲಯಬದ್ಧ ಯೋಗಾಸನ ಮುಂತಾದ ಪ್ರಕಾರಗಳು ಸೇರಿ ಒಟ್ಟು 10 ಯೋಗಾಸನ ಪ್ರಕಾರಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಒಬ್ಬ ಸ್ಪರ್ಧಿ ಗರಿಷ್ಠ 3 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಜಿಲ್ಲೆಯ ಹಲವಾರು ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಣ ನೀಡಲಾಗುತ್ತಿದ್ದು, ಜಿಲ್ಲೆಯ ಮಕ್ಕಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಯೋಗಾಸಕ್ತರು ಸೇರಿ ಈ ಸ್ಪರ್ಧೆಯ ಯಶಸ್ಸಿಗೆ ಸಹಕರಿಸಬೇಕು ಎಂದು ಹರನಾಳ ಮನವಿ ಮಾಡಿದ್ದಾರೆ. ₹300 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಊಟ ಮತ್ತು ಪ್ರಮಾಣಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು ಪಿ.ಆರ್. ಮೆಟಿ ಮೊ: 81475 32029, ಕಾರ್ಯದರ್ಶಿ ಜಗದೀಶ ತಳವಾರ ಮೊ: 85480 60043 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 3 ರಂದು ಜಿಲ್ಲಾ ಯೋಗಾಸನ ಸ್ಪರ್ಧೆ
