ಸಪ್ತಸಾಗರ ವಾರ್ತೆ, ವಿಜಯಪುರ, ಜು. 25:
ಜು. 27 ರಂದು ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ ಬೆಳಗಾವಿ ಜಿಲ್ಲೆಯ ಸವದತ್ತಿಯ ಗುರುರಾಜ ಭವನ್ ಲಿಂಗರಾಜ್ ಕಾಲೇಜ್ ನಲ್ಲಿ ನಡೆಯಲಿದೆ.
ಕರ್ನಾಟಕ ಆರ್ಮ್ ಕುಸ್ತಿ,ಸಂಸ್ಥೆ ಮತ್ತು ಛತ್ರಪತಿ ಫೌಂಡೇಶನ್ ಹಾಗೂ ಸವದತ್ತಿ ವಿ ಎಸ್ ಫಿಟ್ನೆಸ್ ಸೆಂಟರ್ ಇವರ ವತಿಯಿಂದ ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ ಆಯೋಜಿಸಲಾಗಿದೆ. ಪುರುಷರ ತೂಕದ ವಿವರ- 50- 55, 60-65,70-75,-80-85,-90-95,-100+100 ಈ ರೀತಿ 12 ವಿಭಾಗದಲ್ಲಿ ಕ್ರೀಡಾಕೂಟ ನಡೆಯಲಿದೆ.
ಚಾಂಪಿಯನ್ ಆಫ್ ದಿ ಚಾಂಪಿಯನ್, ವಿನ್ನರ ಕ್ರೀಡಾಪಾಟುವಿಗೆ 5000 ರೂ. ನಗದು ಬಹುಮಾನ, ರನ್ನರ ಕ್ರೀಡಾಪಟುವಿಗೆ 2500 ರೂ. ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವವರು ಹೆಸರನ್ನು ನೋಂದಾಯಿಸಬಹುದು ಎಂದು ಬಸವರಾಜ ಬಾಗೇವಾಡಿ ಉತ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು. 27 ರಂದು ರಾಜ್ಯ ಮಟ್ಟದ ಆರ್ಮ್ ಕುಸ್ತಿ ಕ್ರೀಡಾಕೂಟ
