11 ಗಂಟೆಯಲ್ಲಿ 20 ಎಕರೆ ಜಮೀನು ಹರಗಿದ ಎತ್ತುಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:
11 ಗಂಟೆಗಳಲ್ಲಿ ನಿರಂತರವಾಗಿ 20 ಎಕರೆ ಹೊಲವನ್ನು ಹರಗಿ ಎತ್ತುಗಳು ಸಾಧನೆ ಮಾಡಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಿದೆ.
ಕುದುರಿ ಸಾಲವಾಡಗಿ ಗ್ರಾಮದ ಗುರುಸ್ವಾಮಿ ಚಿಕ್ಕಮಠ ಅವರ ಎತ್ತುಗಳು ಜಾಗೀರದಾರ ಅವರ ಹೊಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ 4 ಗಂಟೆಯವರೆಗೆ
ಬಿಡದೆ 20 ಎಕರೆ ಜಮೀನು ಹರಗಿ ಸಾಧನೆ ಮಾಡಿವೆ.
ಸಾಧನೆ ಮಾಡಿದ ಎತ್ತುಗಳನ್ನು ರೈತರು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂತೋಷ ಹಂಚಿಕೊಂಡರು.
ಈ ಸಂದರ್ಭದಲ್ಲಿ ಎತ್ತುಗಳ ಮಾಲಿಕ ಗುರುಸ್ವಾಮಿ ಚಿಕ್ಕಮಠ, ಲಾಲು ಮುಮ್ಮನಗಿ, ಗುರುನಗೌಡ ಪಾಟೀಲ, ಹುಸೇನ್ ಬಾಷಾ ಮುಲ್ಲಾ, ಯೋಗೇಶ ಕನ್ನೂರ, ಪರಸಪ್ಪ ಪೂಜಾರಿ, ಸುರೇಶ ಸಜ್ಜನ, ಮಲಕಪ್ಪ ಕಲ್ಮನಿ, ಗುರುಪಾದ ಅವಟಿ, ಬಾಬು ಸಾತಿಹಾಳ, ಕಾಲೇಸಾಬ ಅತ್ತಾರ, ಸಿದ್ದಪ್ಪ ಕತಗರ, ಅಪ್ಪಣ್ಣ ಕಳ್ಳಿಮನಿ, ಬೀರಪ್ಪ ಪೂಜಾರಿ, ಬಸಪ್ಪ ಬಾವುರ ಹಾಗೂ ಊರಿನ ಪ್ರಮುಖರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

Share