ಬಿಎಲ್ ಡಿಇ ಡೀಮ್ಡ್ ವಿವಿಗೆ ರ‍್ಯಾಂಕ್


ಸಪ್ತಸಾಗರ ವಾರ್ತೆ, ವಿಜಯಪುರ, ಆ. 8: ದೇಶದ ಹೆಸರಾಂತ ನಿಯತಕಾಲಿಕ ಔಟಲುಕ್-ಐಸಿಎಆರ್‌ಇ ನಡೆಸಿದ ವಿಶ್ವವಿದ್ಯಾಲಯ ರ‍್ಯಾಂಕ್ ಕಿಂಗ್ – 2025ರ ಸಮೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮೂರು ವಿಭಾಗಗಳಲ್ಲಿ ರ‍್ಯಾಂಕ್(Rank) ಪಡೆದಿದೆ.
ದೇಶದ 15 ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ 4ನೇ ‌ರ‍್ಯಾಂಕ್(Rank), ದೇಶದ 25 ಮಲ್ಟಿ-ಡಿಸಿಪ್ಲಿನರಿ ಡೀಮ್ಡ್ ವಿವಿಗಳಲ್ಲಿ 10ನೇ ‌ರ‍್ಯಾಂಕ್(Rank), ಹಾಗೂ ದೇಶದ 15 ಡೀಮ್ಡ್ ವಿವಿ ನ್ಯಾಶನಲ್ ಎಮಿನನ್ಸ್ ವಿಭಾಗದಲ್ಲಿ 10ನೇ ರ‍್ಯಾಂಕ್ (Rank) ಪಡೆಯುವ ಮೂಲಕ ಗಮನ ಸೆಳೆದಿದೆ.
ವಿವಿಯ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಡೀಮ್ಡ್ ವಿವಿ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ವಿವಿಯ ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಸಂತಸ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಮುಂಬರುವ ದಿನಗಳಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ ಎಂದು ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Share