ಸಪ್ತ ಸಾಗರ ವಾರ್ತೆ, ವಿಜಯಪುರ, ಆ. 9:
45 ದಿನಗಳಲ್ಲಿಯೇ ಮತದಾರರ ಪಟ್ಟಿ ಡಿಲೀಟ್ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಗೋಲ್ ಮಾಲ್ ಮಾಡಲಾಗಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಈಗಾಗಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತದಾರರ ಪಟ್ಟಿಯ ಗೋಲ್ ಮಾಲ್ ಕುರಿತು ಹೇಳಿದ್ದಾರೆ.
ರಾಜ್ಯದಲ್ಲಿ ನಿನ್ನೆ ಸಮಾವೇಶದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದೆ. ಮಹದೇವಪುರದಲ್ಲಿ ನಡೆದ ಅಕ್ರಮ ಕುರಿತು ಮಾಹಿತಿ ನೀಡಲಾಗಿದೆ.
ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ಮೆಟ್ ನಲ್ಲಿ ಕೊಡಿ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒತ್ತಾಯ ಮಾಡಿದೆ. ಮತದಾರ ಪಟ್ಟಿಯ ಮಾಹಿತಿಯನ್ನು 45 ದಿನಗಳಲ್ಲಿ ಅಳಿಸಿ ಹಾಕಲಾಗಿದೆ. ತರಾತುರಿಯಲ್ಲಿ
ಯಾಕೆ ಡಿಲೀಟ್ ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದರು.
ಡಿಜಿಟಲ್ ರೂಪದಲ್ಲಿ ಕೊಟ್ಟರೆ ನಕಲಿ ಕುರಿತು ಎಲ್ಲವೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಡಿಜಿಟಲ್ ಫಾರ್ಮಾಟ್ ನಲ್ಲಿ ಮಾಹಿತಿ ಕೊಡುತ್ತಿಲ್ಲ.
ಮಾದೇವಪುರ ಒಂದು ಉದಾಹರಣೆ ಅಷ್ಟೇ. ಡಿಜಿಟಲ್ ಫಾರ್ಮೆಟ್ ನಲ್ಲಿ ಮತದಾರ ಮಾಹಿತಿಯನ್ನು ಕೊಟ್ಟರೆ 524 ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿಯು ಸಿಗಲಿದೆ. ಇದರಿಂದ ಎಲ್ಲೆಲ್ಲಿ ಅಕ್ರಮವಾಗಿದೆ ಎಂದು ತಿಳಿದು ಬರುತ್ತದೆ.
ಪಾರದರ್ಶಕವಾಗಿ ಚುನಾವಣೆ ನಡೆದಿದ್ದರೆ ಡಿಜಿಟಲ್ ಫಾರ್ಮೆಟ್ ನಲ್ಲಿ ಕೊಡಲು ಯಾಕೆ ಹಿಂಜರಿಕೆ ಎಂದು ಸಚಿವ ಎಂ.ಬಿ. ಪಾಟೀಲ್ ಕೇಳಿದರು.
ಮತದಾರರ ಮಾಹಿತಿಯನ್ನು ಕನಿಷ್ಠ 5 ವರ್ಷವಾದರೂ ಸಂಗ್ರಹಿಸಿ ಇಡಬೇಕು.
10: 10 ಚದರ ಅಡಿ ಮನೆಯಲ್ಲಿ 80 ಮತದಾರರ ವಿಳಾಸವಿದೆ. ಅದರ ಮಾಲೀಕ ಬಿಜೆಪಿ ಬೆಂಬಲಿಗ. ಹತ್ತು ಚದರ ಅಡಿಯ ಮನೆಯಲ್ಲಿ ಇಷ್ಟು ಜನರು ಇರಲು ಹೇಗೆ ಸಾಧ್ಯ ಎಂದರು.
ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸಾಂವಿಧಾನಿಕ ಹುದ್ಧೆ ಹೊಂದಿದ್ದಾರೆ.
ಅವರಿಗೆ ಅಫಿಡವಿಟ್ ಕೇಳುತ್ತೀರಿ. ಇದು ಹಾಸ್ಯಾಸ್ಪದ. ಚುನಾವಣೆಯಲ್ಲಿ ನಿಗದಿತ ಮತಗಳ ಮಾರ್ಜಿನ್ ದಾಟಿದವರು ಗೆದ್ದಿದ್ದಾರೆ. ನ್ಯಾರೋ ಮಾರ್ಜಿನ್ ನವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದನ್ನೆಲ್ಲ ಬುದ್ದಿವಂತಿಕೆಯಿಂದ ಮಾಡುತ್ತಾರೆ ಎಂದು ಹೇಳಿದರು.
ಪಾರ್ಲಿಮೆಂಟ್ ನಲ್ಲಿ 25 ರಿಂದ 30 ಸೀಟ್ ಗಳು ನ್ಯಾರೋ ಮಾರ್ಜಿನ್ ನಲ್ಲಿ ಆಗಿವೆ.
ಎಲ್ಲವೂ ಅಕ್ರಮ ಆಗಿರುವ ಸಾಧ್ಯತೆ ಇದೆ.
ಕೆಲ ಪ್ರತಿಶತ ಮತಗಳನ್ನು ಕೇಂದ್ರೀಕರಿಸಿ ಮಾಡುತ್ತಾರೆ ಎಂದರು.
ಒಳ ಮೀಸಲಾತಿ ಜಾರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಒಳ ಮಿಸಲಾತಿ ವರದಿ ಕ್ಯಾಬಿನೆಟ್ ನಲ್ಲಿ ಸಲ್ಲಿಕೆಯಾಗಿದೆ.
1300 ಪುಟಗಳ ವರದಿ ಸಲ್ಲಿಕೆಯಾಗಿದೆ. ಅದನ್ನು ನಾವ್ಯಾರು ಓದಿಲ್ಲ. ಓದಿ ತಿಳಿದುಕೊಂಡು ಮಾತನಾಡಬೇಕಿದೆ.
ಮುಂದೆ ಅಗಷ್ಟ 16 ರ ಸಾಯಂಕಾಲ 5 ಕ್ಕೆ ನಡೆಯುವ ಕ್ಯಾಬಿನೆಟ್ ಗೆ ಬರಲಿದೆ ಎಂದು ಮಾಹಿತಿ ನೀಡಿದರು.
ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆಯುವ ವಿಚಾರ ಮಾತನಾಡಿ,
ಸಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ವಿಜಯಪುರ ನಗರದಲ್ಲಿ ಕ್ಯಾಬಿನೆಟ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಿಜಿಟಲ್ ಫಾರ್ಮೆಟ್ ನಲ್ಲಿ ಮತದಾರ ಪಟ್ಟಿ ನೀಡುವ ವ್ಯವಸ್ಥೆ ಆಗಬೇಕು: ಸಚಿವ ಎಂ.ಬಿ. ಪಾಟೀಲ್
