ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ,ಆ.೧೨:
ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಮೂರು ದಿನಗಳ ವರೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ಈ ಹೋರಾಟವನ್ನು ಉದ್ದೇÀಶಿಸಿ ಎಐಕೆಕೆಎಮ್‌ಎಸ್ ರಾಜ್ಯ ಕಾರ್ಯದರ್ಶಿ ಬಿ. ಭಗವಾನ್‌ರೆಡ್ಡಿ ಅವರು ಮಾತನಾಡಿ, ಕಳೆದ ಜನವರಿ ತಿಂಗಳಲ್ಲಿ ರಾಜ್ಯ ಮಟ್ಟದ ಸುಮಾರು ೪೨೦೦೦ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಪ್ರೀಡ್‌ಂ ಪಾರ್ಕ್ನಲ್ಲಿ ಸತತ ೪ ದಿನಗಳ ಹೋರಾಟ ಕೈಗೊಂಡಾಗ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಪ್ರತಿಯೊಬ್ಬರಿಗೂ ಕೇಂದ್ರದ ಭಾಗಶಃ ಪ್ರೋತ್ಸಾಹಧನ ಮತ್ತು ರಾಜ್ಯದ ಗೌರವಧನಗಳನ್ನು ಕ್ರೂಢೀಕರಿಸಿ ಕನಿಷ್ಟ ೧೦೦೦೦ ಗೌರವಧನ ಗ್ಯಾರಂಟಿ ಮಾಡುತ್ತೇವೆ ಮತ್ತು ಬಜೆಟ್‌ನಲ್ಲಿ ಸಹ ಹೆಚ್ಚಳ ಘೋಷಿಸುತ್ತೇವೆ ಎಂದು ಹೇಳಿದ್ದರು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಈ ದೇಶದ ದೊಡ್ಡ ಶ್ರೀಮಂತರಿಗೆ ಕೋಟಿ ಕೋಟಿ ಹಣವನ್ನು ಸಾಲ ನೀಡಿ ಈಗ ಅವರ ಸಾಲವನ್ನು ಕೇಳುತ್ತಿಲ್ಲ. ಕೇವಲ ೧೦೦೦೦ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜನವರಿ ತಿಂಗಳಲ್ಲಿ ನಡೆದ ಹೋರಾಟದಲ್ಲಿ ಆಶ್ವಾಸನೆ ಕೊಟ್ಟಿದ್ದನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ರಾಜ್ಯವ್ಯಾಪಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬ್ಯಾಂಕ್ ಯೂನಿಯನ್ ನಿವೃತ್ತ ಅಧಿಕಾರಿ ಜಿ.ಜಿ. ಗಾಂಧಿ ಅವರು ಮಾತನಾಡಿ, ಒಂದು ಕುಟುಂಬ ಜೀವನ ನಿರ್ವಹಿಸಲು ಕನಿಷ್ಠ ೨೫೦೦೦ ವೇತನ ಅವಶ್ಯಕತೆಯಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರಂತೆ ಪ್ರಥಮಚಿಕಿತ್ಸೆ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ಕನಿಷ್ಟ ಪ್ರೋತ್ಸಾಹಧನ ಕೂಡ ನೀಡುತ್ತಿಲ್ಲ. ಹೆಚ್ಚು ಕೆಲಸ ತೆಗೆದುಕೊಂಡು ಕಡಿಮೆ ಸಂಬಳ ನೀಡಲಾಗುತ್ತಿದೆ. ಕನಿಷ್ಠ ವೇತನ ನೀಡದೆ ಅವರಿಂದ ದುಡಿಸಿಕೊಳ್ಳುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಹೆಚ್.ಟಿ. ಭರತಕುಮಾರ ಅವರು ಮಾತನಾಡಿ, ಆಶಾ ಸಂಘಟಿತ ಹೋರಾಟ ಬಲಿಷ್ಠಗೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿದಂತಹ ರಾಜ್ಯ ಸರ್ಕಾರ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಕೆಂದ್ರ ಸರ್ಕಾರಗಳು ಇಂದು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿಲ,. ಮಾಲೀಕರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತಿದೆ. ನಮ್ಮ ದುಡಿತಕ್ಕೆ ನಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಕನಿಷ್ಠ ವೇತನ ೧೦೦೦೦ ಕೂಡಲೇ ಜಾರಿಗೊಳಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಈ ಹೋರಾಟದಲ್ಲಿ ಐದು ಜಿಲ್ಲೆಯ ಆಶಾ ಕಾರ್ಯಕರ್ತೆಯರ ನಾಯಕರುಗಳು ಭಾಗವಹಿಸಿದ್ದರು.
ನಿರ್ಮಲಾ, ಜಯಶ್ರಿ ಕುಂಬಾರ, ಮೆಹರುನ್ನಿಸಾ ಜಬನೂರು, ಮಲ್ಲಮ್ಮ, ರೇಣುಕಾ ಕಲಗುಟಿಕರ, ಲಕ್ಷಿö್ಮÃ ಸೀಮೆಕೇರಿ ಹಾಗೂ ೩೦೦ ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಭಾಗವಹಿಸಿದ್ದರು.

Share