ಸಪ್ತಸಾಗರ, ವಾರ್ತೆ, ವಿಜಯಪುರ, ಆ. 13 :
ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳ ವಿರುಧ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಹಿಂದೂ ಸಂಘಟನೆ ಮುಖಂಡರು ಹಾಗೂ ಧರ್ಮಸ್ಥಳದ ಭಕ್ತಾದಿಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಯಿತು. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಮೆರವಣಿಗೆ ನಂತರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಪ್ರಮುಖರಾದ ಶಿವಾನಂದ ದೇಸಾಯಿ, ಅಪ್ಪುಗೌಡ ಪಾಟೀಲ್(ಮನಗೂಳಿ), ಸಿದಗೊಂಡ ಬಿರಾದಾರ, ಸಂಗನಗೌಡ ಪಾಟೀಲ್, ಮಹಾವೀರ ಪಾರೇಖ, ಚಂದ್ರಶೇಖರ ಕವಟಗಿ, ರಾಜು ಮಗಿಮಠ ಮುಂತಾದ ಪ್ರಮುಖರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಅಂಬೇಡ್ಕರ್ ವೃತ್ತದಲ್ಲಿ ಅನೇಕ ಮುಖಂಡರು ಮಾತನಾಡಿ, ಪುಣ್ಯ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದಿರುವವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರವು ದುಡಿಯುವ ವರ್ಗಗಳಿಗೆ ಆರ್ಥಿಕ ನೆರವು ನೀಡಿ ಮಹಿಳಾ ಸಬಲೀಕರಣ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.
ಸಾಮಾಜಿಕ ಚಿಂತಕ, ಎಸ್.ವಿ. ಪಾಟೀಲ,
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಶಿವಾನಂದ ದೇಸಾಯಿ ಅವರು ಮಾತನಾಡಿ, ಅನಾಮಿಕ ವ್ಯಕ್ತಿಯನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪೂಜ್ಯರಾದ ಮಲ್ಲಿಕಾರ್ಜುನ ಸ್ವಾಮಿಜಿ, ಬೆಂಗಳೂರ ಸರ್ಪಭೂಷಣ ಶಿವಯೋಗಿ,
ಕರಭಂಟನಾಳ ಶಿವಕುಮಾರ ಸ್ವಾಮೀಜಿ,
ತಡವಲಗಾ ರಾಚೋಟೇಶ್ವರ ಸ್ವಾಮಿಜಿ,
ಅಹಿರಸಂಗದ ಅಭಿನವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಶೀತಲಕುಮಾರ ಓಗಿ, ಸಂಜು ಐಹೊಳ್ಳಿ, ಧರೆಪ್ಪ ಹೊನವಾಡ, ಯೋಗೇಶ ನಡುವಿನಕೇರಿ, ವಿ.ಸಿ. ನಾಗಠಾಣ, ರವೀಂದ್ರ ಬಿಜ್ಜರಗಿ, ಸಿದ್ರಾಮಪ್ಪ ಉಪ್ಪಿನ, ಅಪ್ಪಾಸಾಹೇಬ ಮುತ್ತಿನ, ಉಮೇಶ ಕಾರಜೋಳ, ರಾಘು ಅಣ್ಣಿಗೇರಿ, ಮಾಯಕ್ಕ ಚೌಧರಿ,
ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಶಿವರುದ್ರ, ಬಾಗಲಕೋಟ,
ರಾಜು ಜಾಧವ, ಉಮೇಶ ವಂದಾಲ,ಬಿ.ಡಿ. ಪಾಟೀಲ, ಶ್ರೀಮಂತ ಸಲಗರ, ಡಾ ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ಶ್ರೀಕೃಷ್ಣ ಗುನ್ಹಾಳಕರ, ಉದಯಕುಮಾರ ಗುಮಶೆಟ್ಟಿ, ಲಕ್ಷ್ಮಿ ಕನ್ನೊಳ್ಳಿ, ದೇವನಗೌಡ ಬಿರಾದಾರ, ಪ್ರವೀಣ ಕಾಸರ,ಉಮೇಶ ಕೊಳಕೂರ, ಸಾವಿತ್ರಿ ಕಲ್ಯಾಣಶೆಟ್ಟಿ, ಮಹಾಂತೇಶ ಆಸಂಗಿ, ಅನೇಕ ಸಂಘ ಸಂಸ್ಥೆಗಳ ಮುಂಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಧರಣಿ ಸ್ಥಳದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುಧ್ಧ ಷಡ್ಯಂತ್ರ ರೂಪಿಸಿದವರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹ
