ಸಪ್ತಸಾಗರ ವಾರ್ತೆ,ವಿಜಯಪುರ, ಆ. 21: ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಉದಯಲಿಂಗೇಶ್ವರ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತರ ಜರುಗಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣದ ಮಹಾಮಂಗಲ ಕಾರ್ಯಕ್ರಮ ಆಗಸ್ಟ 25 ಕ್ಕೆ ಪೀಠಾಧ್ಯಕ್ಷ ಶ್ರೀ ಮ ಘ ಚ ಚನ್ನಮಲ್ಲಿಕಾರ್ಜುನ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗುವದು.
ಅಂದು ಬೆಳಿಗ್ಗೆ 7 ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಹಾಪೂಜೆ, 9 ಕ್ಕೆ ಶ್ರೀ ಉದಯಲಿಂಗೇಶ್ವರ ರಜತ ಮೂರ್ತಿಯ ಭವ್ಯ ಅಡ್ಡ ಪಲ್ಲಕ್ಕಿ ಮಹೋತ್ಸವವು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜರುಗುವದು.
ಧರ್ಮಸಭೆ: ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಜರುಗಲಿದೆ.
ಬೊಮ್ಮನಹಳ್ಳಿ ಗವಿಮಠದ ಷ ಬ್ರ ಗುರುಶಾಂತ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ರೂಡಗಿ ವಿರಕ್ತಮಠದ ಷ.ಬ್ರ. ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಬೀದರ ಜಿಲ್ಲೆಯ ಐನಾಪುರ ಹಿರೇಮಠದ ಷ.ಬ್ರ. ಉಪಮನ್ಯು ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಅಗರಖೇಡ ವಿರಕ್ತಮಠದ ಮ ನಿ ಪ್ರ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಉಪದೇಶಾಮೃತ ನೀಡುವರು. ಪುರಾಣಿಕರಾದ ಉಮರಾಣಿಯ ಮುರುಗೇಂದ್ರ ಶಾಸ್ತ್ರಿಗಳು, ಗಾಯಕ ವಿರುಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ ಉಪಸ್ಥಿತರಿರುವರು.
ಈ ನಿಮಿತ್ತ ಎಲ್ಲ ಭಕ್ತಾದಿಗಳು ಈ ಮಹಾಮಂಗಲ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪುನೀತರಾಗಬೇಕೆಂದು ಶ್ರೀ ಉದಯಲಿಂಗೇಶ್ವರ ಸೇವಾ ಬಳಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಾಣ ಮಹಾಮಂಗಲ ಕಾರ್ಯಕ್ರಮ ಆ.25ಕ್ಕೆ


