ಸಪ್ತಸಾಗರ ವಾರ್ತೆ ವಿಜಯಪುರ, ಆ. 26:
ತಾನು ಕಷ್ಟಪಟ್ಟು ತನ್ನ ಮಕ್ಕಳು ಸುಖವಾಗಿ ಬಾಳಲಿ ಎಂದು ಮಕ್ಕಳಿಗೋಸ್ಕರ ಜೀವನವನ್ನು ಮುಡುಪಾಗಿಟ್ಟ ಈ ಜಗತ್ತಿನ ಶ್ರೇಷ್ಠ ತ್ಯಾಗ ಜೀವಿ ಅವ್ವ, ಅವ್ವನ ವ್ಯಕ್ತಿತ್ವವನ್ನು ವರ್ಣಿಸಲು ಪದಗಳೇ ಸಾಲದು, ನಮ್ಮ ಕಣ್ಣು ಮುಂದೆ ಕಾಣುವ ನಿಜವಾದ ದೇವತೆ ತಾಯಿ ಎಂದು ವಾಗ್ಮಿ ಸಾಹಿತಿ, ಅಶೋಕ ಹಂಚಲಿ ಹೇಳಿದರು.
ಇಂದು ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡ ಮಾತೃ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಮಾತನಾಡಿ, ಹೆತ್ತು ಹೊತ್ತು ತುತ್ತು ಮಾಡಿ ತಿನಿಸಿ ನಮ್ಮನ್ನು ಬೆಳೆಸಿದ ತಾಯಿಯ ಋಣವನ್ನು ಯಾವ ಜನುಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮಕ್ಕಳ ಏಳಿಗೆಗಾಗಿ ಶ್ರಮ ಪಡುವ ಜಗತ್ತಿನ ಏಕೈಕ ಕರುಣಾಮಯಿ ತಾಯಿ. ತಾಯಿಗೆ ತಾಯಿನೇ ಸಾಟಿ. ಪ್ರತಿನಿತ್ಯ ಪ್ರತಿಕ್ಷಣ ತಾಯಿಯನ್ನು ಪ್ರೀತಿಸಬೇಕು. ಗೌರವಿಸಬೇಕು. ತಾಯಿಯ ಸೇವೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರ ನಶಿಸಿ ಹೋಗುತ್ತದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯವನ್ನು ತುಂಬುವ ಕೆಲಸವನ್ನು ನಿರಂತರವಾಗಿ ನಮ್ಮ ಶಾಲೆ ಮಾಡುತ್ತಿದೆ ಎಂದು ಹೇಳಿದರು.
ನಿರ್ದೇಶಕ ರಾಮಸ್ವಾಮಿ ಕೊಳಮಲಿ ಮಾತನಾಡಿ, ತಾಯಿಯೇ ಮೊದಲು ಗುರು ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕೃಪಾಮಯಿ ಶಾರದಾ ಆಶ್ರಮದ ಅಧ್ಯಕ್ಷೆ ಕೈವಲ್ಯಮಯ ಮಾತಾಜಿಯವರು ಆಶೀರ್ವಚನ ನೀಡಿ, ತಾಯಿಗೆ ಈ ಜಗತ್ತಿನಲ್ಲಿ ಅಗ್ರಮಾನ್ಯ ಸ್ಥಾನವಿದೆ ತಾಯಿಗಿಂತ ಬಂಧುವಿಲ್ಲ ತಾಯಿಯ ಪ್ರೀತಿಗೆ ಸರಿ ಸಮನಾದದ್ದು ಯಾವುದು ಇಲ್ಲ ವಂಶದ ಕುಡಿದಾಗ ಶ್ರಮಿಸುವ ಶ್ರೇಷ್ಠ ಜೀವಿ ತಾಯಿ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ ಮಾತನಾಡಿ, ನಿಸರ್ಗದ ಶ್ರೇಷ್ಟ ಮಾತೆ ತಾಯಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ತಾಯಂದಿರ ಪಾದ ಪೂಜೆಯನ್ನು ಮಾಡಲಾಯಿತು
ಸಿಆರ್‌ಪಿ ಸವಿತಾ ಬಿ ಎನ್. ಅಲಿಯಾಬಾದ ಗ್ರಾಮ ಪಂಚಾಯತಿ ಸದಸ್ಯ ಸುಭಾಷ್ ಪವಾರ ,ಸಿದ್ದಪ್ಪ ಪೂಜಾರಿ, ಗಣಪತಿ ಒಡೆಯರ್, ಅಮಸಿದ್ದ ಬಂಡಿವಡ್ಡರ, ಹಾಗೂ ಸಂಸ್ಥೆ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಗಾಯಕ ಸೋಮಶೇಖರ ಕೊರ್ಲೆ ಪ್ರಾರ್ಥಿಸಿದರು, ಶಿಕ್ಷಕ ಗಂಗರಾಮ ಲಚ್ಚನ ಸ್ವಾಗತಿಸಿ ನಿರೂಪಿಸಿದರು.
ಕನಕ ಪಬ್ಲಿಕ್ ಶಾಲೆಯಲ್ಲಿ “ಮಾತೃ ಸಂಗಮ” ಕಾರ್ಯಕ್ರಮ
