ಸಪ್ತಸಾಗರ ವಾರ್ತೆ ವಿಜಯಪುರ, ಆ. 28:
ಬ್ಯಾಂಕಿನಲ್ಲಿ ಕಳುವಾದ ಚಿನ್ನಕ್ಕೆ ಪರಿಹಾರ ರೂಪದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ನೀಡಬೇಕೆಂದು ಆಗ್ರಹಿಸಿ ಗ್ರಾಹಕರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಕೆನೆರಾ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಮೇ 25ರಂದು ಮನಗೂಳಿ ಕೆನರಾ ಬ್ಯಾಂಕ್ ನಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಕಳ್ಳರು ಈ ಬ್ಯಾಂಕಿನಿಂದ 58 ಕೆಜಿಗೂ ಅಧಿಕ ಚಿನ್ನ, 5 ಲಕ್ಷ ನಗದು ಹಣ ಕದ್ದು ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಸೇರಿ 15 ಜನ ಕದೀಮರನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರಿಂದ 39 ಕೆಜಿ ಚಿನ್ನ, 1.16 ಕೋಟಿ ನಗದು, ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದೀಗ ಕಳುವಾಗಿರುವ ಅಡವಿಟ್ಟ ಚಿನ್ನಕ್ಕೆ ಬ್ಯಾಂಕಿನವರು ಕಡಿಮೆ ಪರಿಹಾರ ನೀಡುತ್ತಿದ್ದಾರೆಂದು ಆರೋಪಿಸಿ ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿ 10 ಗ್ರಾಂಗೆ 92 ಸಾವಿರ ಹಣ ಪರಿಹಾರ ನೀಡುತ್ತಿದ್ದಾರೆ. ಪ್ರಸಕ್ತ ಮಾರುಕಟ್ಟೆ ದರ ನೀಡುವುದಾಗಿ ಬ್ಯಾಂಕ್ ಅಧಿಕಾರಗಳು ಭರವಸೆ ನೀಡಿದ್ದರು. ಆದರೆ ಈಗ ಕಡಿಮೆ ಬೆಲೆಯಲ್ಲಿ ಪರಿಹಾರ ನೀಡುತ್ತಿರುವುದನ್ನು ವಿರೋಧಿಸಿ ಗ್ರಾಹಕರು ಪ್ರತಿಭಟನೆ ನಡೆಸಿ ಬ್ಯಾಂಕ್ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಅಡವಿಟ್ಟ ಚಿನ್ನ ನೀಡಿ
ಇಲ್ಲವೇ ಚಿನ್ನದ ಪ್ರಸಕ್ತ ಮಾರುಕಟ್ಟೆ ದರ ನೀಡಬೇಕೆಂದು ಒತ್ತಾಯ ಮಾಡಿದರು.
ಸ್ಥಳಕ್ಕೆ ಕೆನೆರಾ ಬ್ಯಾಂಕ್ ಎಜಿಎಂಗಳಾದ ಜಮೀರ್ ಹಾಗೂ ಬಿಮಲ್, ಮ್ಯಾನೇಜರ್ ಸುರೇಶ ಪಾರ್ವತಿಕರ ಭೇಟಿ ನೀಡಿದರು. ಈ ವೇಳೆ ಗ್ರಾಹಕರು ಬ್ಯಾಂಕ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ನಮಗೆ ನ್ಯಾಯ ಬೇಕೆಂದು ಒತ್ತಾಯ ಮಾಡಿದರು.
ಬ್ಯಾಂಕ್ ಅಧಿಕಾರಿಗಳು ಮೇಲಾಧಿಕಾರಿಗಳ ಜೊತೆಗೆ ಪೋನ್ ನಲ್ಲಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದರು.
ಇದರಿಂದಾಗಿ ಸ್ಥಳದಲ್ಲಿ ಸ್ವಲ್ಪ ಹೊತ್ತು ಗಗುವಿನ ವಾತಾವರಣ ನಿರ್ಮಾಣವಾಗಿತ್ತು.
ಡಿವೈಎಸ್ಪಿ ಟಿ.ಎಸ್. ಸುಲ್ಪಿ, ಇನ್ಸಪೆಕ್ಟರ್ ರಮೇಶ ಆವಜಿ, ಪಿಎಸ್ಸೈ ಶ್ರೀಕಾಂತ ಕಾಂಬಳೆ ಹಾಗೂ ಸಿಬ್ಬಂದಿ
ಒಂದು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ.
ಕಳುವಾದ ಅಡಿವಿಟ್ಟ ಚಿನ್ನಕ್ಕೆ ಪ್ರಸ್ತುತ ಮಾರುಕಟ್ಟೆ ಬೆಲೆ ನೀಡಬೇಕೆಂದು ಆಗ್ರಹಿಸಿ ಗ್ರಾಹಕರಿಂದ ಬ್ಯಾಂಕ್ ಎದುರು ಪ್ರತಿಭಟನೆ
