ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಸಚಿವ ಶಿವಾನಂದ ಪಾಟೀಲರಿಗೆ ಮನವಿ ಸಲ್ಲಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಆ. 30:
ವಿಜಯಪುರ ನಗರದಲ್ಲಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಬೇಡ. ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕು ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಶನಿವಾರ ಜವಳಿ, ಕಬ್ಬು, ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸರಕಾರದಿಂದ ಉದ್ದೇಶಿತ ಪಿಪಿಪಿ ಮಾದರಿಯಡಿ ಖಾಸಗಿ ಸಹಭಾಗಿತ್ವದಡಿ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರವನ್ನು ಕೈ ಬಿಡಬೇಕು ಎಂದು ಮನವಿ ಸಲ್ಲಿಸಲಾಯಿತು. ಜೊತೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಮುಖ್ಯಂತ್ರಿ ಮೇಲೆ ಒತ್ತಡ ತರುವಂತೆ ಆಗ್ರಹಿಸಲಾಯಿತು.
ಈ ನಿಯೋಗದಲ್ಲಿ ಹೋರಾಟ ಸಮಿತಿಯ ಸಂಚಾಲಕ ಸಮಿತಿಯ ಸದಸ್ಯರುಗಳಾದ ಬಿ.ಭಗವಾನರೆಡ್ಡಿ, ಅರವಿಂದ ಕುಲಕರ್ಣಿ, ನಾಸಿರ್, ಮಲ್ಲಿಕಾರ್ಜುನ ಕೆಂಗನಾಳ, ಗೀತಾ ಹೆಚ್, ಭರತಕುಮಾರ ಹೆಚ್. ಟಿ, ಬಾಬುರಾವ್, ಫಯಾಜ್ ಕಲಾದಗಿ, ಸಿದ್ದಲಿಂಗ ಬಾಗೇವಾಡಿ, ಸಿದ್ದರಾಮ ಹಿರೇಮಠ, ಶ್ರೀಕಾಂತ, ಲಲಿತಾ ಬಿಜ್ಜರಗಿ ಅವರು ಭಾಗವಹಿಸಿದ್ದರು.

Share