ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 3:
ಏಳನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಂಗಳವಾರ ರಾತ್ರಿ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಅವಘಡ ನಗರದ ಗಾಂಧಿ ವೃತ್ತದ ಬಳಿ ಟಾಂಗಾ ನಿಲುಗಡೆ ಸ್ಥಳದಲ್ಲಿ ಸಂಭವಿಸಿದೆ.
ನಗರದ ಡೋಬಲೆ ಗಲ್ಲಿ ನಿವಾಸಿ
ಶುಭಂ ಸಂಕಳ (21) ಮೃತ ಯುವಕ.
ಇದೇ ವೇಳೆ ಪ್ರಭಾಕರ ಜಂಗಲೆ ಹಾಗೂ ಲಖನ್ ಚವ್ಹಾಣ ಎಂಬ ಯುವಕರು ಗಾಯಗೊಂಡಿದ್ದು, ಈ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣೇಶ ಮೂರ್ತಿ ಮೆರವಣಿಗೆ ಸಾಗಲು ವಿದ್ಯುತ್ ತಂತಿ ಮೇಲೆತ್ತುವ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ಎಲ್ಲ ಗಣೇಶನ ಮೂರ್ತಿಗಳನ್ನು ಪೊಲೀಸರು ಲಗುಬಗೆಯಿಂದ ವಿಸರ್ಜನೆಗೆ ಕಳುಹಿಸಿದರು.
ಸ್ಥಳದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಆಗಮಿಸಿ ಮುಂಜಾಗ್ರತೆ ಕ್ರಮ ಕೈಗೊಂಡರು.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಯುವಕ ಸಾವು, ಇಬ್ಬರಿಗೆ ಗಾಯ
