ಭೀಮಾ ನದಿಗೆ ಹಾರಿ ಮಹಿಳೆ ಆತ್ಮಹತ್ಯ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 4: ಸೊಲ್ಲಾಪುರ -ವಿಜಯಪುರ ಗಡಿಯ ಭೀಮಾ ನದಿಗೆ ಕಟ್ಟಲಾಗಿರುವ ಬ್ಯಾರೇಜ್ ಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಇಂಡಿ ಪಟ್ಟಣದ ಬೀರಪ್ಪನಗರ ನಿವಾಸಿ ಸುಶಿಲಾಬಾಯಿ ಶಾಂತಪ್ಪ ಬಿರಾದಾರ (62) ಎಂದು ಗುರುತಿಸಲಾಗಿದೆ.
ವಿಜಯಪುರ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಭೀಮಾನದಿ ಬ್ಯಾರೇಜ್ ಮೇಲಿನಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತ ಮಹಿಳೆಯ ಪತಿ ಮನೆ ಇಂಡಿ ಪಟ್ಟಣದಲ್ಲಿದ್ದು, ತವರು ಮನೆ ಸೊಲ್ಲಾಪುರ ಜಿಲ್ಲೆಯ ಟಾಕಳಿಯಲ್ಲಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಮಂದ್ರೂಪ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Share this