ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8 : ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ
ತೆಲಂಗಾಣದ ವಾರಂಗಲ್ ಮೂಲದ ಮಾಂಗಳ್ಯ ಶಾಪಿಂಗ್ ಮಾಲ್ ತನ್ನ ಶಾಖೆಯನ್ನು ಆರಂಭಿಸಿದ್ದು ಅದ್ಧೂರಿ ಚಾಲನೆ ಪಡೆದಿದೆ. ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹಾಗೂ ಕನ್ನಡ ಚಲನಚಿತ್ರದ ಪ್ರಖ್ಯಾತ ನಟಿ ಆಶಿಕಾ ರಂಗನಾಥ ಜ್ಯೊತಿ ಬೆಳಗಿಸಿ ಚಾಲನೆ ನೀಡಿದರು.
ತೆಲಂಗಾಣ ರಾಜ್ಯದ ವಾರಂಗಲ್ ಮೂಲದ ಮಾಂಗಳ್ಯ ಶಾಪಿಂಗ್ ಮಾಲ್ 2012 ರಲ್ಲಿ ಆರಂಭಗೊಂಡು ವಿವಿಧ ಮಹಾನಗರದಲ್ಲಿ ತನ್ನ 24 ಶಾಖೆಗಳನ್ನು ತೆರೆದಿದೆ. ಇದೀಗ 25 ನೇ ಶಾಖೆಯನ್ನು ಐತಿಹಾಸಿಕ ವಿಜಯಪುರ ಮಹಾನಗರದಲ್ಲೂ ತೆರೆದಿದೆ. ಗುಮ್ಮಟ ನಗರಿಯ ಹೃದಯ ಭಾಗವಾದ ಗಾಂಧಿ ಚೌಕ್ ಪರಿಸರದಲ್ಲಿ ಹತ್ತಾರು ಸಾವಿರ ಗ್ರಾಹಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ.
ಬಸವನಾಡಿನ ಗ್ರಾಹಕರ ವಸ್ತ್ರ ಆಸಕ್ತಿಗೆ ತಕ್ಕಂತೆ, ಟ್ರೆಂಡಿಗ್ ಹಾಗೂ ವೈವಿಧ್ಯಮಯ ಸಾವಿರಾರು ವಿನ್ಯಾಸ, ಆಕರ್ಷಕ ಬೆಲೆ, ಗರಿಷ್ಠ ಗುಣಮಟ್ಟದ ವಸ್ತ್ರಗಳನ್ನು ಮಾಂಗಳ್ಯ ಶಾಪಿಂಗ್ ಮಾಲ್ ನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ತೆಲುಗು ನೆಲದಲ್ಲಿ ಜನ್ಮ ತಳೆದು ಪ್ರಖ್ಯಾತಿ ಪಡೆದಿರುವ ಮಾಂಗಳ್ಯ ಸಂಸ್ಥೆ 13 ವರ್ಷಗಳಲ್ಲಿ 25ನೇ ಶಾಖೆಗಳನ್ನು ಸ್ಥಾಪಿಸುವ ಹಂತಕ್ಕೆ ಬಂದಿರುವುದು ಗ್ರಾಹಕರ ವಿಶ್ವಾಸಾರ್ಹತೆಗೆ ಸಾಕ್ಷಿ. ವಿಜಯಪುರ ಜಿಲ್ಲೆಯಲ್ಲೂ ಗ್ರಾಹಕರ ಆಸಕ್ತಿ ಹಾಗೂ ನಿರೀಕ್ಷೆಗೆ ತಕ್ಕಂತೆ ತನ್ನ ಸೇವೆ ನೀಡಿ, ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.
ಮಾಲ್‌ನ ವಿವಿಧ ವಿಭಾಗಗಳಿಗೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅವರು, ಗ್ರಾಹಕರ ಉತ್ಸಾಹಕ್ಕೆ ಸ್ವಯಂ ಬಟ್ಟೆ ಖರೀದಿಸಿ ಪ್ರೋತ್ಸಾಹ ನೀಡಿದರು.
ತಮ್ಮ ಉದ್ಯಮ ಸಂಸ್ಥೆಯ ಕುರಿತು ವಿವರ ನೀಡಿದ ಮಾಂಗಳ್ಯ ಶಾಪಿಂಗ್ ಮಾಲ್ ನಿರ್ದೇಶಕ ಪುಲ್ಲೂರು ನರಸಿಂಹಮೂರ್ತಿ, ವಿಜಯಪುರ ಮಹಾನಗರದಲ್ಲಿ ನಮ್ಮ ಸಂಸ್ಥೆಯ ಶಾಪಿಂಗ ಮಾಲ್ ಆರಂಭಿಸುವ ಮೂಲಕ ಸ್ಥಳೀಯ 250 ಕ್ಕೂ ಹೆಚ್ಚು ನಿರುದ್ಯೋಗಿ ಯುವಜನರಿಗೆ ಉದ್ಯೋಗ ನೀಡಲಾಗಿದೆ. ನಮ್ಮ ಸಿಬ್ಬಂದಿ ಗ್ರಾಹಕ ಸ್ನೇಹಿ ವರ್ತನೆ ತೋರುವುದಕ್ಕಾಗಿ ತರಬೇತಿ ನೀಡಲು ನುರಿತ 60 ಅನುಭವಿ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ವೈವಿಧ್ಯಮಯ ವಿನ್ಯಾಸ, ಬಣ್ಣಗಳ ಸಹಿತ ಬಸವನಾಡಿನ ಗ್ರಾಹಕರಿಗೆ ಯೋಗ್ಯದರದಲ್ಲಿ ಗುಣಮಟ್ಟದ ವಸ್ತ್ರಗಳನ್ನು ಮಾರಾಟ ಮಾಡಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಮಹಿಳೆಯರು, ಮಕ್ಕಳು, ಯುವ ಸಮೂಹದ ಹೊಸ ತಲೆಮಾರಿನ ಆಕರ್ಷಕ ವಿನ್ಯಾಸಗಳು ಲಭ್ಯವಿವೆ. ನಿಶ್ಚಿತಾರ್ಥ, ಮದುವೆ, ಜನ್ಮದಿನ, ಹಬ್ಬಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಅಗತ್ಯ ಇರುವ ಬಟ್ಟೆಗಳ ಸಂಗ್ರಹ ನಮ್ಮ ಶಾಪಿಂಗ್ ಮಾಲ್ ನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯ ಇವೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯು ನಮ್ಮದೇ ಆದ ಮಗ್ಗಗಳಲ್ಲಿ ನೆಯ್ದ ಬಟ್ಟೆಗಳನ್ನು, ಮಾರುಕಟ್ಟೆ ಟ್ರೆಂಡ್‌ಗಳಿಗೆ ಹೊಂದುವಂತೆ ತಯಾರಿಸುತ್ತಿದೆ. ಹೀಗಾಗಿ ಸ್ಪರ್ಧಾತ್ಮಕ ಪರಿಸ್ಥಿತಿ ಎದುರಿಸಲು ಹೊಸ ಹೊಸ ವಿನ್ಯಾಸಗಳ ವಸ್ತ್ರಗಳನ್ನು ಪರಿಚಯಿಸುತ್ತೇವೆ ಎಂದು ತಮ್ಮ ಉದ್ಯಮದ ವೈಶಿಷ್ಟ್ಯಗಳ ಬಗ್ಗೆ ಹೆಮ್ಮೆಯಿಂದ ವಿವರ ನೀಡಿದರು.
ಸಂಸ್ಥೆಯ ಪ್ರಮುಖರಾದ ಕಾಸಂ ನಮಶಿವಾಯ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ, ಕಾಸಂ ಶಿವ ಪ್ರಸಾದ, ಪುಲ್ಲೂರು ಅರುಣಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತೆಲಂಗಾಣದ ಮಾಂಗಳ್ಯ ಮಾಲ್ ಗುಮ್ಮಟ ನಗರಿಯಲ್ಲೂ ಆರಂಭ


