ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಹಾಸಿಂಪೀರ ವಾಲಿಕಾರ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 11 : ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಕತ೯ವ್ಯ. ಮಾನವ ಹಕ್ಕುಗಳನ್ನು ಸರ್ಕಾರ ಹಾಗೂ ಸಮುದಾಯದ ಜೊತೆಯಾಗಿ ಪಾಲನೆ ಪರಿಣಾಮಕಾರಿಯಾಗಬೇಕು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ಹಾಗೂ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ನಗರದ ಎಸ್.ಬಿ. ಜೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ಮಾನವ ಹಕ್ಕುಗಳ ಘಟಕದ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳ ಅರಿವು ಕುರಿತು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಅನೇಕ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವೆ. ಸರಕಾರಿ ಇಲಾಖೆಗಳಲ್ಲಿ ಸಾವ೯ಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ ಮಾನವ ಹಕ್ಕುಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎಂದರು. ಎಸ್ ಬಿ ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯಲಕ್ಷ್ಮಿ ಕೆಂಗನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಹಕ್ಕುಗಳ ಕುರಿತು ಭಾರತೀಯ ಸಂವಿಧಾನ ಅನೇಕ ಮೂಲಭೂತ ಹಕ್ಕುಗಳಿಂದ ಮಾನವನ ಜೀವನ ಮೌಲ್ಯಯುತವಾಗಿ ಬದುಕಲು ಮುಕ್ತ ಅವಕಾಶ ನೀಡಿದೆ. ಡಿಸೆಂಬರ ೧೦ ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸುತ್ತೇವೆ. ವಿದ್ಯಾರ್ಥಿಗಳು ಮಾನವ ಹಕ್ಕುಗಳನ್ನು ರಕ್ಷಿಸಲು ಪ್ರಥಮ ಆದ್ಯತೆ ನೀಡಬೇಕೆಂದರು.
ಪ್ರೊ. ಮಾಳಪ್ಪ ಸಿದ್ಧನಾಥ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರೊ. ಸಂತೋಷ ಚಿನಗುಂಡಿ ಸ್ವಾಗತಿಸಿದರು. ಸಂಯೋಜಕ ಪ್ರೊ. ಅನೀಲ ಅಬಲಾಪೂರ ಮಾನವ ಹಕ್ಕುಗಳು ಪ್ರತಿಯೊಬ್ಬರು ಅರಿತು ಬದುಕಬೇಕು. ಮಾನವ ಕುಲದ ಶ್ರೇಷ್ಠತೆ ಕುರಿತು ಕವನ ವಾಚಿಸಿದರು. ಪ್ರೊ ಭಾಗ್ಯಶ್ರೀ ಹಿರೇಮಠ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ವಿಶ್ವನಾಥ ನಾಯಕ. ಪ್ರೊ. ಕಾಜಲ ನಾಯಕ, ಪ್ರೊ. ರಾಜೇಶ್ವರಿ ವಾಗ್ಮಡಿ, ಪ್ರೊ. ಸಚಿನ್ ಅವಟಿ. ಪ್ರೊ. ಭಾಸ್ಕರ ಕುಲಕರ್ಣಿ, ಪ್ರೊ. ಗುರುಪಾದಯ್ಯ ಹಿರೇಮಠ, ವಿದ್ಯಾಧರ ಪಾಟೀಲ, ಲಕ್ಷ್ಮಿ ದೇವರಕರ ಮುಂತಾದವರು ಉಪಸ್ಥಿತರಿದ್ದರು.

Share this