ಹೆಸ್ಕಾಂ ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡದಿರಲು ಮನವಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12 : ಹೆಸ್ಕಾಂ ಗ್ರಾಮೀಣ ಉಪ ವಿಭಾಗವನ್ನು ಶಿವಗಿರಿಗೆ ಸ್ಥಳಾಂತರ ಮಾಡುವುದನ್ನು ತಡೆಹಿಡಿಯುವಂತೆ ಒತ್ತಾಯಿಸಿ ರೈತ ಭಾರತ ಪಕ್ಷದಿಂದ ಹೆಸ್ಕಾಂ ಅಧೀಕ್ಷಕ ಅಭಿಯಂತರ ಅವರ ಮೂಲಕ ಶುಕ್ರವಾರ ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ್ ಕಟಕದೊಂಡ ಅವರಿಗೂ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಹೊಸ ಕಟ್ಟಡವನ್ನು ಕಟ್ಟಿಸಿರುತ್ತೀರಿ ಅಂತ ಅಲ್ಲಿಗೆ ಗ್ರಾಮೀಣ ಉಪವಿಭಾಗವನ್ನು ಸ್ಥಳಾಂತರ ಮಾಡುವ ಕುರಿತು ಎಲ್ಲರೂ ಹೇಳುತ್ತಿದ್ದು ಇದರಿಂದ ಎಲ್ಲಾ ಹಳ್ಳಿಯ ಜನರಿಗೆ ನೇರವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನಾನುಕೂಲಗಳೆ ಜಾಸ್ತಿ ಆಗುತ್ತವೆ. ಏನೆಂದರೆ ನೇರವಾಗಿ ಅಲ್ಲಿಗೆ ಹೋಗಲು ಬಸ್ಸಿನ ಸೌಕರ್ಯವನ್ನು ಇರುವುದಿಲ್ಲ ಮತ್ತು ಗ್ರಾಹಕರಿಗೆ ಇದರಿಂದ ಅನುಕೂಲವಾಗುವುದಿಲ್ಲ. ಆದ ಕಾರಣ ಕೂಡಲೇ ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡದೆ ಇದ್ದ ಜಾಗದಲ್ಲಿಯೇ ಮುಂದುವರಿಸಿ ವಿಜಯಪುರ ನಗರದಲ್ಲಿ ಇನ್ನೊಂದು ಉಪ ವಿಭಾಗವನ್ನು ಮಾಡಿ ಈ ಭಾಗದ ಜನರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಎಂಬಿ ಪಾಟೀಲ್ ನಗರಕ್ಕೆ ಹೋಗಿ ಬರುವುದು ತುಂಬಾ ಅನಾನುಕೂಲವಾಗುತ್ತದೆ. ಈಗಿರುವ ಕಟ್ಟಡದಲ್ಲಿ ವಿಜಯಪುರ ನಗರ ವಿಭಾಗ -೩ ನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಗ್ರಾಮೀಣ ಉಪ ವಿಭಾಗವನ್ನು ಸ್ಥಳಾಂತರ ಮಾಡಬಾರದೆಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ಸ್ಥಳಾಂತರ ಮಾಡಲು ಮುಂದಾದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೆಗಡಿಹಾಳ ತಾಂಡಾದ ಮುಖಂಡರಾದ ಗಂಗಾರಾಮ ರಾಠೋಡ ಉಪಸ್ಥಿತರಿದ್ದರು.

Share this