ನಾಳೆ ಕುರುಬ ಸಮಾಜದ ಸಭೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 17:
ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ. 22ರಿಂದ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆಯನ್ನು ಸೆ. 18ರಂದು ಬೆಳಗ್ಗೆ 11-30 ಗಂಟೆಗೆ ಮಧುವನ ಹೋಟೆಲ್ ಸಭಾಂಗಣದಲ್ಲಿ ಕರೆಯಲಾಗಿದೆ.
ಗಣತಿದಾರರು ತಮ್ಮ ಮನೆಗೆ ಬಂದಾಗ ಸರ್ಕಾರದಿಂದ ಸಾಮಾಜಿಕ, ಶಿಕ್ಷಣ, ಆರ್ಥಿಕ ಹಾಗೂ ಉದ್ಯೋಗ ಇತ್ಯಾದಿ ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ನಮ್ಮ ಸಮಾಜದ ಬಂಧುಗಳು ಧರ್ಮ ಕಾಲಂ 8″ರಲ್ಲಿ ಹಿಂದೂ ಎಂದು ಹಾಗೂ “ಜಾತಿ ಕಾಲಂ ನಂ 9”ರಲ್ಲಿ ಸರ್ಕಾರದ ಗೇಜೆಟ್ ನಂ 0809 “ಕುರುಬ” ಎಂಬುದಾಗಿ ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಉಪ ಜಾತಿ ಕಾಲಂನಲ್ಲಿಯೂ ಸಹ “ಕುರುಬ “ ಎಂದು ಜಾತಿಯನ್ನು ಬರೆಯಿಸಬೇಕು. ಇನ್ನಿತರ ಯಾವುದೇ ಪರ್ಯಾಯ ಜಾತಿಗಳ ಪದನಾಮಗಳನ್ನು ಬರೆಯಿಸಬಾರದು. ಇದರ ಅಂಗವಾಗಿ ಈ ಜಾತಿ ಜನಗಣತಿ ಹಾಗೂ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ವಿಜಯಪುರ ಜಿಲ್ಲೆಯಲ್ಲಿರುವ ನಮ್ಮ ಸಮಾಜದ ಬಂದುಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ವಿಸ್ತ್ರೃತವಾಗಿ ಚರ್ಚಿಸಲಾಗುವುದು.
ಸಭೆಯಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪನವರು, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಅಧ್ಯಕ್ಷ ಎಂ. ಈರಣ್ಣ ಅವರು ಕಾರ್ಯಾಧ್ಯಕ್ಷ ಬಸವರಾಜ ಬಸಳಿಗುಂದಿ, ಪ್ರಧಾನ ಕಾರ್ಯದರ್ಶಿ ಎಂ.ವಿ. ಸೋಮಶೇಖರ, ಖಜಾಂಚಿ ಕೆ.ಎಮ್. ಕೃಷ್ಣಮೂರ್ತಿ ಹಾಗೂ ಇನ್ನುಳಿದ ಪದಾಧಿಕಾರಿಗಳು ಪೂರ್ವಭಾವಿ ಸಭೆಗೆ ಆಗಮಿಸುತ್ತಿದ್ದು, ಆದ್ದರಿಂದ ವಿಜಯಪುರ ಜಿಲ್ಲೆಯಲ್ಲಿರುವ ನಮ್ಮ ಸಮಾಜದ ಬಂಧುಗಳು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಕಿತ್ತೂರ, ರಾಜ್ಯ ನಿರ್ದೇಶಕರುಗಳಾದ ರಾಜಶೇಖರ ಕುರಿಯವರ, ರಾಜೇಶ್ವರಿ ಗೌಡರ, ಕರೆಪ್ಪ ಬಸ್ತಾಳ ಹಾಗೂ ವಿಜಯಪುರ ಜಿಲ್ಲಾ ಅಧ್ಯಕ್ಷರುಗಳಾದ ರಾಜಕುಮಾರ ಕಂಬಾಗಿ, ಮಲ್ಲಣ್ಣ ಶಿರಶ್ಯಾಡ ಹಾಗೂ ತಾಲೂಕಾ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಮುಖಂಡರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share