ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 19:
ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜನರಿಗೆ ಒಂದೇ ದಿನ ನಾಲ್ಕು ಬಾರಿ ಭೂಕಂಪನ ಸಂಭವಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಸಿಂದಗಿ ಪಟ್ಟಣದ ಸುತ್ತಮುತ್ತ ಒಂದೇ ದಿನ ನಾಲ್ಕು ಬಾರಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ, ರಾತ್ರಿ 10 ಗಂಟೆ 11ನಿಮಿಷ, ಮತ್ತೆ ರಾತ್ರಿ 10.25, ಮತ್ತೊಮ್ಮೆ 10.47 ಒಟ್ಟು 4 ಬಾರಿ ಭೂಮಿ ಕಂಪನಿಸಿದ ಅನುಭವವಾಗಿದೆ ಎಂದು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗಾಬರಿಯಿಂದ ಜನ ಮನೆಯಿಂದ ಹೊರಗಡೆ ಬಂದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಒಂದಿಲ್ಲ ಒಂದು ಕಡೆ ಸರಣಿ ಭೂಕಂಪನದ ಅನುಭವವನ್ನು ಜನರು ಅನುಭವಿಸಿದ್ದರು.
ಆದರೆ ನಿನ್ನೆ ಸಿಂದಗಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಾಲ್ಕು ಬಾರಿ ಭೂಕಂಪನ ಸಂಭವಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ. ರಿಕ್ಟರ್ ಮಾಪಕದಲ್ಲಿ ಎಷ್ಟು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಂಬಂಧಿಸಿದ ಇಲಾಖೆ ಈ ಬಗ್ಗೆ ನಿಖರವಾಗಿ ತಿಳಿಸಬೇಕಿದೆ.
ಸಿಂದಗಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ಪದೇ ಪದೇ ಭೂಕಂಪನ ಸಂಭವಿಸಿದ್ದಕ್ಕೆ ಕಾರಣವೇನು , ಜನರಿಗೆ ಸುರಕ್ಷತೆ ಬಗ್ಗೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ಜಿಲ್ಲಾ ಆಡಳಿತ ಚಿಂತನೆ ನಡೆಸಬೇಕಿದೆ.
ಸಿಂದಗಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದೇ ದಿನ ನಾಲ್ಕು ಬಾರಿ ಭೂಕಂಪನ: ಜನರಲ್ಲಿ ಆತಂಕ
