ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20: ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಅಂಗರಚನಾಶಾಸ್ತ್ರ ವಿಭಾಗಕ್ಕೆ ತಮ್ಮ ದೇಹದಾನ ಮಾಡುವುದಾಗಿ ದಂಪತಿ ಮತ್ತು ನಿವೃತ್ತ ತಹಸೀಲ್ದಾರ ಹೆಸರು ನೋಂದಾಯಿಸಿದ್ದಾರೆ.
ವಿಜಯಪುರ ನಗರದ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಮತ್ತು ವಿವೇಕ ನಗರ ನಿವಾಸಿ ಸುರೇಶ ಚನ್ನಬಸಪ್ಪ ದೇಸಾಯಿ(71) ಮತ್ತು ಅವರ ಪತ್ನಿ ಹಾಗೂ ಸಮಾಜ ಸೇವಕಿ ಗೀತಾ ಸುರೇಶ ದೇಸಾಯಿ(63) ಹಾಗೂ ನಗರದ ಕನಕದಾಸ ಬಡಾವಣೆಯ ನಿವಾಸಿ ಮತ್ತು ನಿವೃತ್ತ ತಹಸೀಲ್ದಾರ ಸದಾನಂದ ಸಿದ್ದವೀರಪ್ಪ ಬಬಲೇಶ್ವರ(72) ಅವರು ದೇಹದಾನ ಮಾಡುವುದಾಗಿ ಹೆಸರು ನೋಂದಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಹದಾನ ವಾಗ್ದಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಜಯಪುರದ ಮೂರು ಜನರ ನಿರ್ಧಾರ ಇತರರಿಗೆ ಮಾದರಿಯಾಗಿದೆ ಎಂದು ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಎಸ್. ಬುಲಗೌಡ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor