ಬೀದಿ ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 22: ಬೀದಿ ನಾಯಿ ಕಚ್ಚಿ ಓರ್ವ ಬಾಲಕ ಗಾಯಗೊಂಡಿರುವ ಘಟನೆ ನಗರದ ಕೆಸ್‌ಆರ್‌ಟಿಸಿ ಕಾಲೋನಿಯಲ್ಲಿ ನಡೆದಿದೆ.
ನಗರದ ಸಾಯಿ ಅನ್ವೇಷ ವನಹಳ್ಳಿ (5) ನಾಯಿ ಕಚ್ಚಿ ಗಾಯಗೊಂಡಿದ್ದು, ಕಾಲು, ಕತ್ತು ಮುಂತಾದ ಕಡೆ ನಾಯಿ ಕಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಬಾಲಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಲ್ಲಿನ ವಾರ್ಡ್‌‌ನಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಪಾಲಿಕೆ ಸದಸ್ಯರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ‌.

Share this