ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 24:
ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,
ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ನದಿ ದಂಡೆ ಗ್ರಾಮಗಳ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಚಡಚಣ, ಇಂಡಿ, ಆಲಮೇಲ ತಾಲೂಕಿನ ನದಿ ದಂಡೆ ಗ್ರಾಮದ ಜನತೆಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಜಲಾವೃತವಾಗಿವೆ.
ಕರ್ನಾಟಕ, ಮಹಾರಾಷ್ಟ ಸರ್ಕಾರಗಳುಭೀಮಾ ನದಿಗೆ ಅಡ್ಡಲಾಗಿ ಸಮಾನಾಂತರವಾಗಿ ನಿರ್ಮಾಣ ಮಾಡಿರುವ ಗೋವಿಂದಪುರ-ಭಂಡಾರಕವಟೆ, ಔಜ-ಶಿರನಾಳ, ಚನೇಗಾಂವ-ಬರೂರ
ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬ್ಯಾರೇಜ್ ಗಳು ಜಲಾವೃತವಾಗಿವೆ. ಇದರಿಂದ
ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ.
ಭೀಮಾನದಿ ಸುತ್ತಮುತ್ತಲಿನ ಪ್ರದೇಶದ ಜಮೀನುಗಳಿಗೆ ನೀರು ಪಸರಿಸಿದೆ. ಹೀಗಾಗಿ ಜಮೀನುಗಳಲ್ಲಿ ಬೆಳೆದ ವಿವಿಧ ಬೆಳೆಗಳು ಹಾಳಾಗುವ ಭೀತಿಯನ್ನು ರೈತರು ಎದುರಿಸಿದ್ದಾರೆ.
ಭೀಮಾ ನದಿಗೆ ಅಪಾರ ಪ್ರಮಾಣದ ನೀರು: ಪ್ರಭಾವದ ಭೀತಿಯಲ್ಲಿ ಜನರು


