ಕನ್ನಡಾಂಬೆಯ ಋಣವನ್ನು ತೀರಿಸೋಣ – ನಾಡೋಜ ಡಾ. ಮಹೇಶ ಜೋಶಿ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.28:
ನಾವೆಲ್ಲರೂ ಪವಿತ್ರವಾದ ಈ ಕನ್ನಡ ಮಣ್ಣಿನ ನೆಲದಲ್ಲಿ ಜನಿಸಿದ್ದು, ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಹೊಂದಿದವರಾಗಿರಬೇಕು.
ನಾಡು ಕಟ್ಟುವ ಕಾಯಕದಲ್ಲಿ ನಿರಂತರ ನಮ್ಮನ್ನು ನಾವು ತೊಡಗಿಸಿಕೊಂಡು ಕನ್ನಡಾಂಬೆಯ ಋಣವನ್ನು ತೀರಿಸಬೇಕೆಂದು ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.
ರವಿವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ತಾಲೂಕು ಘಟಕಗಳು ಇನ್ನೂ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.ನಿಮ್ಮ ತಾಲೂಕಿಗೆ ನಿಯೋಜಿಸಲಾದ ದತ್ತಿಗಳನ್ನು ಅವರು ನಿರ್ವಹಿಸಲು ತಿಳಿಸಿದ ದಿನಗಳಂದು ತಪ್ಪದೇ ದತ್ತಿಗೋಷ್ಠಿಗಳನ್ನು ನಡೆಸಿ ನ್ಯಾಯ ಒದಗಿಸಬೇಕು. ಬಾಕಿ ಉಳಿದ ತಾಲೂಕುಗಳು ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡದ ಅಕ್ಷರ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದರು.
ಇದೇ ಸಂದರ್ಭದಲ್ಲಿ ತಾಲೂಕು ಸಮ್ಮೇಳನಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆಯನ್ನು ರಸೀದಿಯೊಂದಿಗೆ ಸರಿಯಾದ ಲೆಕ್ಕಾಚಾರ ನಿರ್ವಹಿಸಿ ಉಳಿದ ಹಣವನ್ನು ಕೇಂದ್ರ ಪರಿಷತ್ತಿಗೆ ನೀಡಿ ಜಂಟಿ ಖಾತೆಯನ್ನು ನಿರ್ವಹಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ. ಎಂ. ಪಟೇಲ ಪಾಂಡು ಮಾತನಾಡಿ, ತಾಲೂಕು ಅಧ್ಯಕ್ಷರುಗಳು ತಮ್ಮ ತಾಲೂಕು ಘಟಕಗಳಲ್ಲಿ ನಿರಂತರವಾಗಿ ದತ್ತಿಗೋಷ್ಠಿಗಳು, ಸಮ್ಮೇಳನಗಳು, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ನಡೆಸಿ ಪಾರದರ್ಶಕ ಆಡಳಿತದ ಲೆಕ್ಕಾಚಾರದೊಂದಿಗೆ ಪರಿಷತ್ತಿನ ಘನತೆ, ಗೌರವ ಕಾಪಾಡಿಕೊಂಡು ಹೋಗಬೇಕೆಂದರು.
ಜಿಲ್ಲಾ ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ, ಗೌರವ ಸಲಹೆಗಾರ ಡಾ. ವ್ಹಿ. ಡಿ. ಐಹೊಳ್ಳಿ, ಕಲಬುರ್ಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು.
ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಶಿಲ್ಪಾ ಭಸ್ಮೆ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕಸಾಪ ಪದಾಧಿಕಾರಿ ಜಿ. ಕೆ. ತಳವಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳಾದ ಸುರೇಶ ಶೇಡಶ್ಯಾಳ, ಅರ್ಜುನ ಲಮಾಣಿ, ಶಿವರಾಜ ಬಿರಾದಾರ, ಎಂ.ಸಿ. ಮುಲ್ಲಾ, ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷ ಸಿದ್ದು ಮೇಲಿನಮನಿ, ಸಿಂದಗಿ ತಾಲೂಕ ಅಧ್ಯಕ್ಷ ವಾಯ್.ಸಿ. ಮಯೂರ. ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ,
ಬಬಲೇಶ್ವರ ಅಧ್ಯಕ್ಷ ಖಾಜಾಪಟೇಲ ಪಾಟೀಲ, ಬಸವನ ಬಾಗೇವಾಡಿ ಅಧ್ಷಕ್ಷ ಶಿವಾನಂದ ಡೋಣೂರ, ನಗರ ಘಟಕ ಅಧ್ಯಕ್ಷ ಜಗದೀಶ ಬೋಳಸೂರ, ತಾಲೂಕಾ ಕಸಾಪ ಅಧ್ಯಕ್ಷರನ್ನು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಗೌರವಿಸಿ ಸನ್ಮಾನಿಸಿದರು.
ಕಸಾಪ ಸಂಘಟನಾ ಕಾರ್ಯದರ್ಶಿ ಮಹ್ಮದಗೌಸ ಹವಾಲ್ದಾರ ಸ್ವಾಗತಿಸಿ ಗೌರವಿಸಿದರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ ನಿರೂಪಿಸಿದರು. ಶೋಭಾ ಬಡಿಗೇರ ಅಹಮ್ಮದ ವಾಲಿಕಾರ ನಿರ್ವಹಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಮಲಾ ಮುರಾಳ, ರವಿ ಕಿತ್ತೂರ, ಡಾ. ಸಂಗಮೇಶ ಮೇತ್ರಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಅಲ್ಲಾಭಕ್ಷ ವಾಲೀಕಾರ, ವಾಯ್. ಸಿ. ಮಯೂರ, ಶಿವಾನಂದ ಡೋಣೂರ, ಸಿದ್ಧರಾಮ ಬಿರಾದಾರ, ಬಿ. ಕೆ. ಗೋಟ್ಯಾಳ, ಶಾಂತಾ ವಿಭೂತಿ, ಲತಾ ಗುಂಡಿ, ಗಂಗಮ್ಮ ರಡ್ಡಿ, ಸಿದ್ರಾಮಯ್ಯ ಲಕ್ಕುಂಡಿಮಠ, ಸಿದ್ದು ರಾಯಣ್ಣವರ ಬಸವರಾಜ ಮೇಟಿ. ಶಶಿಧರ ಪಾಟೀಲ, ಜಿ.ಎಸ್. ಬಳ್ಳೂರ, ಸಂಗಮೇಶ ಬಿಜಾಪೂರ, ಸೈಯದ ನಿಡೋಣಿ, ಅಶೋಕ ಕೋಳಾರಿ, ಅಯೂಬ್ ದೇವರಮನಿ, ತಾಲೂಕಾ ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this