ಮೋದಿ ಜನ್ಮ ದಿನ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ

ಸಪ್ತ ಸಾಗರ ವಾರ್ತೆ, ವಿಜಯಪುರ, ಸೆ. 28:
ವಿಜಯಪುರ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಆಶ್ರಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ 75ನೇ ಜನ್ಮದಿನದ ಪ್ರಯುಕ್ತ ನಗರ ವಲಯದ ಯೋಗಾಪುರ ಹನುಮಾನ ದೇವಸ್ಥಾನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ, ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ ಹಾಗೂ ದಿವ್ಯ ದೇಶಭಕ್ತಿಯ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿರುವ ಈ ಅವಧಿಯಲ್ಲಿ ಭಾರತ ಅಭಿವೃದ್ಧಿಯಲ್ಲಿ ನಾಗಾಲೋಟ ಬೀರುತ್ತಿದೆ. ಮೊನ್ನೆಯಷ್ಟೇ ಜೀವನಾವಶಕ್ಯ ವಸ್ತುಗಳನ್ನು ಜಿಎಸ್‌ಟಿಯ ಪರಿಧಿಯಲ್ಲಿ ಹೊರಗಿಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕಪ್ಪುಹಣದ ಸಮರ ಸೇರಿದಂತೆ ಅನೇಕ ದಿಟ್ಟ ಹೆಜ್ಜೆಗಳನ್ನು ಇರಿಸಿದ ಮೋದಿ ನಮ್ಮ ಹೆಮ್ಮೆಯ ನಾಯಕ ಎಂದರು.
ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ, ಡಾ. ಸುರೇಶ ಬಿರಾದಾರ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಸಂಜೀವ ಐಹೊಳೆ, ಮಹೇಂದ್ರ ನಾಯಕ, ಭೀಮಸಿಂಗ್ ರಾಠೋಡ, ಉಮೇಶ ಕೋಳಕೂರ , ಮಲ್ಲಿಕಾರ್ಜುನ ಜೋಗೂರ, ಮಲ್ಲು ಕಲಾದಗಿ, ಸಾಬು ಮಶ್ಯಾಳ, ಡಾ. ವಿರೇಶ ಪಾಟೀಲ, ಈರಣ್ಣ ರಾವೂರ, ಡಾ. ಅರವಿಂದ ಢಾಣಕಶಿರೂರ, ಡಾ. ಅಶೋಕ ವಾಲಿ, ವಿಜು ಜೋಶಿ, ಭರತ್ ಕುಲಕರ್ಣಿ, ವಿಶ್ವನಾಥ ಪತ್ತಾರ, ಸಿದ್ದನಗೌಡ ಬಿರಾದಾರ, ಡಾ. ಸಂಜು ಶಿಳ್ಳಿನ, ಚನಬಸಪ್ಪ ಮರೆಗುದ್ದಿ, ಮೋಹನಸಿಂಗ್ ರಜಪೂತ, ಕಲ್ಲಪ್ಪ ಹಿಪ್ಪರಗಿ, ಸುನೀಲ್ ಬಿರಾದಾರ, ಡಾ. ಮಲ್ಲಪ್ಪ ರುದ್ದಿ, ಡಾ. ಅಕ್ಷಯ್ ಶುಚನ್ನರ,
ಮಧುಮೇಹ ಮತ್ತು ಹೃದಯರೋಗ ತಜ್ಞ ಡಾ. ಪ್ರೀತಿಕ ಮಂದಿಗಾತ್ರಿ, ಎಲುವು ಕೀಲು ತಜ್ಞ ಡಾ. ಸಂಗಮೇಶ ಮಧುಪತಿ ಮುಂತಾದವರು ಇದ್ದರು.

Share this