ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ವಿಶ್ವ ದಾಖಲೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 30: ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ಅವರು ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.
ವಿಜಯಪುರ ಹೊರ ವಲಯದ ಬೇಗಂ ತಲಾಬ್ ತಾಂಡಾ ನಿವಾಸಿ ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ಈಚೆಗೆ ಫಿಟ್ ಇಂಡಿಯಾ ಏರೋಬಿಕ್ಸ್ ಇನ್ಸ್ಟಿಟ್ಯೂಟ್ ಅನ್ ಲೈನ್ ಮೂಲಕ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ೫ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಮೂರು ನಿಮಿಷ ವೃಕ್ಷಾಸನ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ವಿಶ್ವ ದಾಖಲೆಗಾಗಿ ಕೇವಲ ಮೂರು ನಿಮಿಷ ನಿಗದಿಯಾಗಿತ್ತಾದರೂ ಸಹ ಪ್ರಕಾಶ ಐದು ನಿಮಿಷಗಳ ಕಾಲ ವೃಕ್ಷಾಸನ ಮಾಡುವ ಮೂಲಕ ಸಾಧನೆ ಮೆರೆದಿರುವರು.
ಇವರ ಸಾಧನೆಗೆ ಚಿನ್ನದ ಪದಕ ಮತ್ತು ಟ್ರೋಫಿ ನೀಡಿ ಗೌರವಿಸಲಾಗಿದೆ.

Share this