ಟೆಲೆಸ್ಕೋಪ ತರಬೇತಿಗೆ ಮುಳವಾಡ ಶಾಲೆಯ ವಿದ್ಯಾರ್ಥಿ ಕೃಷ್ಣ ಕುಂಬಾರ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 1: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಬೆಂಗಳೂರ ವತಿಯಿಂದ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಎಂಟು ದಿನಗಳ ಕಾಲ “ನಾನು ವಿಜ್ಞಾನಿ 2025” ಶೀರ್ಷಿಕೆಯಡಿಯಲ್ಲಿ ಶಾಲೆಗೊಂದು ಟೆಲೆಸ್ಕೋಪ ತಯಾರಿಸುವ ತರಬೇತಿಯನ್ನು ನುರಿತ ತಜ್ಞರಿಂದ ನೀಡಲಾಗುತ್ತದೆ.
ಇದೊಂದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸದಾವಕಾಶ ಒದಗಿ ಬಂದಿದೆ. ಈ ತರಬೇತಿಯನ್ನು ದೊಡ್ಡಬಳ್ಳಾಪುರ ಬಳಿಯಿರುವ ಬ್ಯಾಸೆಂಟ್ ಉದ್ಯಾನವನ ಸ್ಕೌಟ್ ಕ್ಯಾಂಪಿನಲ್ಲಿ ನೀಡಲಾಗುವುದು.
ವಿಜಯಪುರ ಜಿಲ್ಲೆಯ ಮುಳವಾಡ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ಕುಮಾರ ಕೃಷ್ಣ ಬಸಪ್ಪ ಕುಂಬಾರ ತರಬೇತಿಗಾಗಿ ಆಯ್ಕೆಯಾಗಿದ್ದಾನೆ.
ಜೊತೆಗೆ ವಿಜ್ಞಾನ ಶಿಕ್ಷಕ ಡಿ.
ಎಸ್. ಖಿಲಾರಿ ಅವರೂ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ತರಬೇತಿಯಲ್ಲಿ ಆರ್. ಎಚ್. ಚನ್ನಬಸವಸ್ವಾಮಿ ಮತ್ತು ಯು.ರಮೇಶ ಅವರು ಮಕ್ಕಳಿಗೆ ಆಕಾಶಕಾಯಗಳ ಪರಿಚಯ ಕುರಿತು ವೈಜ್ಞಾನಿಕ ಪ್ರಜ್ಞೆ ಮೂಡಿಸುವರು. ಸ್ವತ: ವಿದ್ಯಾರ್ಥಿಗಳೇ ಟೆಲೆಸ್ಕೋಪ ತಯಾರಿಸುವರು.

Share this