ಸಪ್ತಸಾಗರ ವಾರ್ತೆ, ವಿಜಯಪುರ, ಅ. 5 : ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಭಾನುವಾರ ೧೮ನೇ ದಿನಕ್ಕೆ ಕಾಲಿಟ್ಟಿದೆ. ಕವಿಗಳು ಹೋರಾಟದ ವೇದಿಕೆಯಲ್ಲಿಯೇ ಕವಿಗೋಷ್ಠಿ ನಡೆಸಿ ಹೋರಾಟಕ್ಕೆ ವಿನೂತನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲೆಯ ೨೦ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚನ ಮಾಡುವ ಮೂಲಕ ಪಿಪಿಪಿ ಬೇಡ. ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಅರ್ಥವತ್ತಾದ ಕವಿತೆಗಳನ್ನು ಓದುವ ಮೂಲಕ ಸರ್ಕಾರದ ಗಮನ ಸೆಳೆದರು.
ಕವಿತೆ ಓದುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದ ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣ ಅವರು,
“ಕೈ ಬಿಡದಿದ್ದರೆ ಪಿಪಿಪಿ
ವೈದ್ಯಕೀಯ ಕಾಲೇಜಿನ ಪಿಂಡ
ರಾಜಕಾರಣಿಗಳ ಬುಡಕ್ಕೆ
ತಾಗುವುದು ಪ್ರಖರ ಹೋರಾಟದ ಕೆಂಡ”
ಎಂಬ ಕವಿತೆ ವಾಚಿಸುವ ಮೂಲಕ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿದರು.
ಪ್ರೊ. ಅಡವಿ ಸ್ವಾಮಿ ಕೊಳಮಲಿ,
ಕವಿ ನಿಂಗೊಂಡಪ್ಪ ರೋಡಗಿ,
ಕವಿ ದೀಪಕ ಶಿಂದೆ, ಲಲಿತಾ ಬಿಜ್ಜರಗಿ,
ಭರತಕುಮಾರ ಎಚ್.ಟಿ.,
ಗಂಗೂಬಾಯಿ ಉಳ್ಳಾಗಡ್ಡಿ,
ರಮೇಶ ಜೋಗೂರ,
ರಾಮಸ್ವಾಮಿ ಕೊಳಮಲಿ,ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ,
ವಿದ್ಯಾವತಿ ಅಂಕಲಗಿ, ಜಗದೇವ ಸೂರ್ಯವಂಶಿ, ಮಲ್ಲು ಬಿಜಾಪುರ, ಎಸ್.ಡಿ.ಕೃಷ್ಣಮೂರ್ತಿ, ಭೀಮಣ್ಣ ಬಜಂತ್ರಿ, ಸವಿತಾ ಬಿ.ಎನ್., ಸುನೀತಾ ಮೋರೆ, ಲಕ್ಷ್ಮಣ ಕಂಭಾಗಿ, ಶಿವಬಾಳಮ್ಮ ಕೊಂಡಗೂಳಿ, ಸಿದ್ರಾಮ ಹಳ್ಳೂರ ಸೇರಿದಂತೆ ೨೦ ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾಡಿ ವಿಜಯಪುರ ಜಿಲ್ಲೆಗೆ ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಹಿರಿಯ ಪತ್ರಕರ್ತ ಅನೀಲ ಹೊಸಮನಿ, ರೈತ ಮುಖಂಡ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ, ಗೀತಾ ಎಚ್., ನಿಂಗರಾಜ ಬಿದರಕುಂದಿ, ಲಗಮನಗೌಡ ಪಾಟೀಲ, ಕಲ್ಲಪ್ಪ ಬಬಲಾದ, ನೀಲಾಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಮಲ್ಲಪ್ಪ ಬಿರಾದಾರ (ಬಬಲಾದ), ಅಕ್ಷಯಕುಮಾರ ಅಜಮನಿ, ಸಿದ್ರಾಮಯ್ಯ ಹಿರೇಮಠ, ಗಜಾನನ ಘಾಟಕೆ, ಮಲ್ಲಪ್ಪ ಬಿರಾದಾರ (ಮಲಘಾಣ) ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಿಜಯಪುರದಲ್ಲಿ ಕವಿಗಳು ಏನು ಮಾಡಿದರು ಗೊತ್ತಾ?


