ರಾಮಾಯಣ ಮೌಲಿಕ ಕೃತಿ – ಡಾ ಸಂಗಮೇಶ ಮೇತ್ರಿ

ಸಪ್ತ ಸಾಗರ ವಾರ್ತೆ ವಿಜಯಪುರ, ಅ. 7: ಕ್ರಿ.ಪೂ. ೫೦೦ ವರ್ಷಗಳ ಹಿಂದೆ ಮಹರ್ಷಿ ವಾಲ್ಮೀಕಿ ಜಗತ್ತಿಗೆ ನೀಡಿದ ಬಹುದೊಡ್ಡ ಕೃತಿ ರಾಮಾಯಾಣ, ಜೀವನ ಮೌಲ್ಯವನ್ನು ತುಂಬಿ ಸರ್ವಕಾಲಿಕ ಸತ್ಯಗಳನ್ನು ಮುಂದಿನ ಜನಾಂಗಕ್ಕೆ ಸಾಗಿಸಿದ. ಮಹಾನ್ ಚೇತನ ವಾಲ್ಮೀಕಿ ಮಹರ್ಷಿಗಳು ಆಗಿದ್ದರು. ತನ್ನ ಹೊಟ್ಟೆ ಪಾಡಿಗೆ ಬೇಟೆ ಆಡಿ ಜೀವನ ಸಾಗುಸುತ್ತಿದ್ದ ಬೇಡ ಒಬ್ಬ ರಾಮಾಯಣ ಕೃತಿ ಜಗತ್ತಿಗೆ ನೀಡಿದ ಶ್ರೇಷ್ಠ ಕವಿಯಾಗಿ ಬದಲಾವಣೆ ಆದದ್ದು ಸರ್ವಕಾಲಿಕ ಸತ್ಯವಾಗಿದೆ ಎಂದು ವಿ.ಎಸ್. ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಚೇರಮನ್ ಡಾ. ಸಂಗಮೇಶ ಮೇತ್ರಿ ಹೇಳಿದರು.
ನಗರದ ವಿ ಎಸ್ ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಹಮ್ಮಿಕೊಂಡ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಇಡೀ ರಾಮಾಯಣದ ತುಂಬ ಜೀವನ ಮೌಲ್ಯಗಳನ್ನು ತುಂಬಿ ನಮಗೆ ಕೊಟ್ಟಿದ್ದು ನಮ್ಮ ನೆಲದ ಪುಣ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಚಿಕ್ಕವರಿರುವಾಗಲೇ ರಾಮಾಯಾಣದಂತ ಕಥೆಗಳು ಹೇಳುತ್ತ ಮಕ್ಕಳನ್ನು ಬೆಳೆಸಿದರೆ ಖಂಡಿತಾ ಆದರ್ಶ ಸಮಾಜ ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸುರೇಶ ಡಬ್ಬಿ ಅವರು ಮಾತನಾಡಿ, ವಾಲ್ಮೀಕಿ ಅವರು ಬರೆದ ರಾಮಾಯಣ ಬದುಕನ್ನು ಹಸನುಗೊಳಿಸುತ್ತದೆ. ಅದು ಬದುಕಿನ ಮೌಲ್ಯಗಳ ಸೆಲೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ವನಜಾಕ್ಷಿ‌ ನಿಡೋಣಿ, ರಾಜಕುಮಾರ ಭಂಡಾರೆ, ಬಸವರಾಜ ಚಲವಾದಿ, ಮಂಜುನಾಥ ಬಜಂತ್ರಿ, ಚಾಂದ ಮುಕಾದಮ, ನಾಗೇಂದ್ರ ಬಿಜ್ಜರಗಿ, ಪದ್ಮಾವತಿ ಕಬಾಡೆ, ಬಸಮ್ಮಮೂರಮಟ್ಟಿ ಮುಂತಾದವರು ಉಪಸ್ಥಿತರಿದ್ದರು.

Share this