ಸಪ್ತಸಾಗರ ವಾರ್ತೆ, ವಿಜಯಪುರ, ಅ. 8: ಸುಪ್ರೀಂಕೋರ್ಟ್ ಸಿಜೆಐ ಮೇಲೆ ಶೂ ಎಸೆತ ಪ್ರಕರಣವನ್ನು
ಜಿಲ್ಲಾ ಶಿವಶರಣ ಸಮಗಾರ ಹರಳಯ್ಯ
ಸಮಾಜದ ಮುಖಂಡ ವಸಂತ ಹೊನಮೋಡೆ ತೀವ್ರವಾಗಿ ಖಂಡಿಸಿದ್ದಾರೆ.
ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಾದ ಸಿಜೆಐ ಬಿ. ಆರ್. ಗವಾಯಿ ಅವರ ಮೇಲೆ ರಾಕೇಶ ಕಿಶೋರ್ ಎಂಬ ಹಿರಿಯ ವಕೀಲ ನ್ಯಾಯಾಲಯ ಸಭಾಂಗಣದಲ್ಲಿ ಶೂ ಎಸೆದು ಭಾರತದ ಉಚ್ಛ ನ್ಯಾಯಾಲಯಕ್ಕೆ ಹಾಗೂ ಭಾರತದ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ತೀವ್ರ ಅವಮಾನ ಮಾಡಿದ್ದು, ಈ ನ್ಯಾಯವಾದಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರುಗಳು ಕಾನೂನಿನ ಪ್ರಕಾರ ತೀರ್ಮಾನ ನೀಡಿದ್ದಾರೆ. ಸನಾತನ ಧರ್ಮದ ಹೆಸರಿನಲ್ಲಿ ನ್ಯಾಯಾಲಯಕ್ಕೆ ಅವಮಾನ ಎಸೆದ ಈ ನ್ಯಾಯವಾದಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯ ನ್ಯಾಯಾಧೀಶರು ದಲಿತ ಎನ್ನುವ ಭಾವದಿಂದ ನ್ಯಾಯವಾದಿ ಶೂ ಎಸೆದಿರುವದು ತೀವ್ರ ಖಂಡನೀಯ ಎಂದು ಜಿಲ್ಲಾ ಶಿವಶರಣ ಸಮಗಾರ ಹರಳಯ್ಯ ಸಮಾಜದ ಮುಖಂಡ ವಸಂತ ಹೊನಮೋಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರ ಮೇಲೆ ಶೂ ಎಸೆತ ಪ್ರಕರಣ: ಹೊನಮೋಡೆ ಖಂಡನೆ


