ನವೆಂಬರ್ ನಲ್ಲಿ ಕವಿಗೋಷ್ಠಿ: ಕವಿತೆಗಳಿಗೆ ಆಹ್ವಾನ

ಸಪ್ತಸಾಗರ ವಾರ್ತೆ ವಿಜಯಪುರ, ಅ. 13:
ಕನ್ನಡ ಪುಸ್ತಕ ಪರಿಷತ್ತಿನ ವತಿಯಿಂದ ಐತಿಹಾಸಿಕ ನಗರ ವಿಜಯಪುರದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದಲ್ಲಿ ಈ ಬಾರಿ ಅರ್ಥಪೂರ್ಣವಾದ ವಿಶಿಷ್ಟ ರೀತಿಯ ಕವನ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ನಾಡಿನ ಕವಿಗಳು ತಮ್ಮ ಸ್ವ ರಚಿತ ಕವನ ವನ್ನು ಸ್ಪರ್ಧೆಯಲ್ಲಿ ವಾಚಿಸುವುದರ ಮೂಲಕ ಸಾವಿರದ ಬಹುಮಾನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು ತಮ್ಮ ಒಂದು ಸ್ವ ರಚಿತ ಕವನವನ್ನು ಪ್ರೊ, ಎ.ಎಚ್. ಕೊಳಮಲಿ, ಮುಖ್ಯೋಪಾಧ್ಯಾಯರು ಚೇತನಾ ಆಂಗ್ಲ್ ಮಾದ್ಯಮ ಪ್ರೌಡ ಶಾಲೆ ಮಾನಸ ರೆಸಿಡೆನ್ಸ್ ದರ್ಗಾ ರಸ್ತೆ ವಿಜಯಪುರ ಈ ವಿಳಾಸಕ್ಕೆ ಅಕ್ಟೋಬರ್ 30 ರ ಒಳಗೆ ಕಳಸಬೇಕೆಂದು ಕನ್ನಡ ಪುಸ್ತಕ ಪರಿಷತ್ತಿನ ತಾಲೂಕ ಅಧ್ಯಕ್ಷ ಸಾಹಿತಿ ಪ್ರೊ,ಅಡವಿಸ್ವಾಮಿ ಕೊಳಮಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.9164135407, 9740560993 ನಂಬರಿಗೆ ಸಂಪರ್ಕಿಸಿ ಬಹುದಾಗಿದೆ.

Share this