ಶಂಕ್ರಪ್ಪ ಚೌಧರಿ ನಿಧನ

ಸಪ್ತಸಾಗರ ವಾರ್ತೆ ವಿಜಯಪುರ, ಅ. 19:
ಸಿಂದಗಿ ತಾಲೂಕು ಕನ್ನೊಳ್ಳಿ ಗ್ರಾಮದ
ಶಂಕರಪ್ಪ ಸಾ ಚೌಧರಿ 84 ಇವರು ಭಾನುವಾರ ನಿಧನ ಹೊಂದಿದರು.
ಮೃತರು ಪತ್ನಿ 3 ಪುತ್ರಿಯರು ಬೆಂಗಳೂರು ತಲಘಟ್ಟಪುರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ಚೌಧರಿ ಸೇರಿದಂತೆ 2 ಪುತ್ರರು ಅಪಾರ ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಸೋಮವಾರ ಮ.12 ಗಂಟೆಗೆ ಕನ್ನೊಳ್ಳಿ ತೋಟದಲ್ಲಿ ಜರುಗಲಿದೆ.
ಸಂತಾಪ: ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರು ಕುಟುಂಬದ ಸದಸ್ಯರಿಗೆ ಸಂತಾಪ ಸಲ್ಲಿಸಿದ್ದಾರೆ.

Share this