ನಡುಬೀದಿಯಲ್ಲಿ ಹಾಡಹಗಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 25 :
ನಡುರಸ್ತೆಯಲ್ಲಿ ಹಾಡುಹಗಲೇ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಿಂದಗಿ ಪಟ್ಟಣದ ಆನಂದ ಟಾಕೀಸ್ ಬಳಿ ಸಂಭವಿಸಿದೆ.
ಹಲ್ಲೆಗೀಡಾದ ಮಹಿಳೆಯನ್ನು ಅನುಸೂಯಾ ಮಾದರ ಎಂದು ಗುರುತಿಸಲಾಗಿದೆ.
ಪತಿ ಯಮನಪ್ಪ ಮಾದರ ಎಂಬಾತ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.
ನಡು ರಸ್ತೆಯಲ್ಲಿಯೇ ಮಚ್ಚು ಹಿಡಿದು ಹಲ್ಲೆ ನಡೆಸಿರುವ ಭೀಬತ್ಸ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಏಕಾಏಕಿಯಾಗಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದಾಗ ಅಲ್ಲಿದ್ದ ಜನರು ಸಹ ಪ್ರಾಣದ ಹಂಗು ತೊರೆದು ಕಾಪಾಡಲು ಮುಂದಾದರೂ ಅವರತ್ತಲೂ ಮಾರಕಾಸ್ತ್ರ ಪ್ರದರ್ಶಿಸಿದ್ದಾನೆ. ಆದರೂ ಕೆಲವು ಯುವಕರು ಕಲ್ಲು ಹಾಗೂ ಬಡಿಗೆಯ ಸಹಾಯದಿಂದ ಆತನನ್ನು ಹಿಡಿದು ಅನಾಹುತ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂದಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

Share this