ಸಪ್ತಸಾಗರ ವಾರ್ತೆ, ವಿಜಯಪುರ, ಅ. 27:
ಹಿಂದೂ ಹುಲಿ ಎಂದು ಕರೆಸಿಕೊಳ್ಳುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನನ್ನ ಜೊತೆಯಲ್ಲಿಯೇ ಈದ್ಗಾ ಮೈದಾನದಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಅವರು ಶಾಸಕ ಯತ್ನಾಳ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ಮಾಧ್ಯಮದವರು ಪ್ರಶ್ನಿಸಲಿ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಹಿಂದೂಗಳು ಎನ್ನುತ್ತಾರೆ.
ಆದರೆ ಇವರು ಬಿಜೆಪಿಯಲ್ಲಿಲ್ಲ.
ಈಶ್ವರಪ್ಪ ಸಹ ಮಾತನಾಡಿದ್ದಾರೆ.
ಅವರೂ ಸಹ ಬಿಜೆಪಿ ಉಚ್ಛಾಟಿತರೇ.
ನಾವೆಲ್ಲ ಭಾರತೀಯರೇ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬೌಗೋಳಿಕ ಹಾಗೂ ಜನಾಂಗೀಯವಾಗಿ ನಾವು ಹಿಂದೂಗಳೆ.
ಸಿಖ್, ಜೈನ್ ಹೇಗೆ ಪ್ರತ್ಯೇಕ ಧರ್ಮವಿದ್ದವೋ ಹಾಗೇ ಲಿಂಗಾಯತ ಪ್ರತ್ಯೇಕ ಧರ್ಮ ಇತ್ತು ಎಂದರು.
ಮನಮೋಹನ್ ಸಿಂಗ್ ಪಿಎಂ ಇದ್ದಾಗ ಜೈನ್ ಸಮಾಜಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದರು. ನಂತರ ಇದನ್ನು ಹಿಂದೂ ಧರ್ಮ ಒಡೆದಿದ್ದೀರಿ ಎಂದು ಬಿಜೆಪಿ ಕೇಳಲಿಲ್ಲ. ಸ್ವಾಮೀಜಿಗಳು ಕೇಳಲಿಲ್ಲ.
ದಾವಣಗೆರೆಯಲ್ಲಿ ವೀರಶೈವ ಮಹಾಸಭಾ ನಾವು ಹಿಂದೂಗಳೆಲ್ಲ ಎಂದಿದ್ದಾರೆ.
ಲಿಂಗಾಯತ ಎಂದಿದ್ದಾರೆ.
ಆಗ ಅಲ್ಲಿ ಯಡಿಯೂರಪ್ಪ, ಶೆಟ್ಟರ್ ಹಾಗೂ ಇತರರು ಇದ್ದರು.
ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ.
ಹಿಂದೂ ಧರ್ಮದ ಕುರಿತು ಪಿಎಂ ಮೋದಿ ಸಹ ಹಿಂದೂ ಧರ್ಮ ಅಲ್ಲ ಅದು ಜೀವನ ಶೈಲಿ ಎಂದು ಹೇಳಿದ್ದಾರೆ ಎಂದರು.
ಎಂ.ಬಿ. ಪಾಟೀಲ ಬಾಯಿ ಮುಚ್ಚಿ ಕೊಳ್ಳಬೇಕು……ಮುಚ್ಚಿಕೊಳ್ಳಬೇಕೆಂದು ಯತ್ನಾಳ ಹೇಳಿದ್ದಾರೆ. ಇದಕ್ಕೆ ನಾನು ಅಂಜುವ ವ್ಯಕ್ತಿಯಲ್ಲ.
ಹಾನಗಲ್ ಕುಮಾರಸ್ವಾಮಿ ಅವರ ಬಗ್ಗೆಯೂ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಮಾತನಾಡುವೆ.
ಇವರಂತೆ ನಾನು ನಿರುದ್ಯೋಗಿ ಅಲ್ಲ.
ನಮಗೆ ಕೆಲಸಗಳಿಗೆ
ಮಾತೆ ಮಹಾದೇವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯತ್ನಾಳ ಬಸವ ಧರ್ಮವನ್ನು ಜಾಗತಿಕ ಧರ್ಮ ಮಾಡುವ ಕುರಿತು ಮಾತನಾಡಿದ್ದರು.
ಹಿಂದೆ ಮುಸ್ಲಿಂ ಟೋಪಿ ಹಾಕಿದ್ದರು ಎಂದರು.
ನನ್ನ ಹಿಂದೆ ಭೂಹಗರಣ ಮಾಡುವವರು ಇದ್ದಾರೆಂದು ಯತ್ನಾಳ ಆರೋಪ ಮಾಡಿದ್ದಾರೆ. ಹಾಗಿದ್ದರೆ ಸಾಕ್ಷಿ ಕೊಡಿ. ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಯತ್ನಾಳ ವಿರುದ್ಧ ಸಚಿವ ಎಂ. ಬಿ. ಪಾಟೀಲ ವಾಗ್ಧಾಳಿ


