ಸಪ್ತಸಾಗರ ವಾರ್ತೆ, ವಿಜಯಪುರ, ಅ. 29:
ಗ್ರಾಮ ಪಂಚಾಯತಿ ಸದಸ್ಯನ ಶವ ಅಪಘಾತವಾದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ನಡೆದಿದೆ. ತಾರಾಪೂರ ಗ್ರಾಮ ಪಂಚಾಯತಿ
ಸದಸ್ಯ ಸಂತೋಷ ಬಿರಾದಾರ (36) ಶವವಾಗಿ ಪತ್ತೆಯಾದ ಯುವಕ.
ಬೈಕ್ ಮೇಲಿಂದ ಬಿದ್ದ ಸ್ಥಿತಿಯಲ್ಲಿರುವ ಶವ ಪತ್ತೆಯಾಗಿದೆ. ತಲೆಗೆ ಏಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ.
ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರ ತನಿಖೆ ಬಳಿಕ ಇದು ಅಪಘಾತವೋ ಕೊಲೆಯೋ ಎಂಬುವುದು ಬೆಳಕಿಗೆ ಬರಲಿದೆ.
ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Editor
Rudrappa B Asangi
Editor
Managing Editor
Chetan Asangi
Managing Editor


