ಸಪ್ತಸಾಗರ ವಾರ್ತೆ,ವಿಜಯಪುರ, ನ. 1 : ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ೬೯ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ರಾದ ಶ್ರೀ ಬಸಯ್ಯ ಹಿರೇಮಠ ಹಾಗೂ ಶಾಲೆಯ ನಾಮಿನಿ ಚೇರ್ಮನ್ ರಾದ ಶ್ರೀ ಎಸ್ ಎಚ್ ನಾಡಗೌಡ ರವರು ಹಾಗೂ ಸಂಸ್ಥೆಯ ಆಡಳಿತಾದಿಕಾರಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯಲಕ್ಷ್ಮೀ ರಾ ಪಟ್ಟೇದ ಅವರು ಹಾಗೂ ಉಪ ಪ್ರಾಚಾರ್ಯರು ಉಪ ಪ್ರಾಂಶುಪಾಲರು ನಾಡದೇವಿ ಭುವನೇಶ್ವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ ಅವರು ಮಾತನಾಡಿ, ಎರಡು ಸಾವಿರ ಇತಿಹಾಸವಿರುವ ಕನ್ನಡ ಭಾಷೆಯು ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಕನ್ನಡ ನಮ್ಮ ಹೃದಯ ಭಾಷೆ ಅದನ್ನು ಗೌರವಿಸೋಣ ಎಂದು ಹೇಳಿದರು.
ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ವಿಶಾಲವಾದ ಕನ್ನಡ ನಾಡು ಅದನ್ನು ಒಂದು ಗೂಡಿಸಲು ಹೋರಾಡಿದ ನಮ್ಮ ಹಿರಿಯರನ್ನು ನೆನೆಯುತ್ತ ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳೆಸೋಣವೆಂದು ಹೇಳಿದರು.
ಶಾಲೆಯ ಪ್ರಾಚಾರ್ಯೆ ವಿಜಯಲಕ್ಷ್ಮೀ ಪಟ್ಟೇದ ಅವರು ಮಾತನಾಡಿ, ತನು ಕನ್ನಡ,ನುಡಿ ಕನ್ನಡ, ಮನ ಕನ್ನಡ ಕನ್ನಡ ನಮ್ಮ ಉಸಿರಾಗಿರಲಿ ಅದನ್ನು ಎಲ್ಲರೂ ಉಳಿಸಿ ಬೆಳೆಸೋಣವೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ನ್ನರು ,ಶಾಲೆಯ ನಾಮಿನಿ ಚೇರ್ಮನ್ ನ್ನರು,ಸಂಸ್ಥೆಯ ಆಡಳಿತಾದಿಕಾರಿಗಳು, ಶಾಲೆಯ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ


