ಮಾತೋಶ್ರೀ ಶಕುಂತಲಾ ಬಾಯಿ ಬೆಳ್ಳಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ .

ಸಪ್ತಸಾಗರ ವಾರ್ತೆ ವಿಜಯಪುರ, ನ.2: ಜಿಲ್ಲೆಯ ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ 70 ನೇ ಕನ್ನಡ ರಾಜ್ಯೋತ್ಸವವ ಕಾರ್ಯಕ್ರಮವನ್ನು ನಾಡ ದೇವಿಗೆ ಪೂಜೆ ಸಲ್ಲಿಸಿ, ನಾಡ ದ್ವಜ ಹಾರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಡಾ.ಆರ್. ಬಿ. ಬೆಳ್ಳಿ ಮಾತನಾಡಿ, ಕನ್ನಡನ್ನು ಉಳಿಸಿರಿ ಕನ್ನಡವನ್ನು ಬೆಳಿಸಿರಿ ಎಂಬ ಸಂದೇಶವನ್ನು ಮಕ್ಕಳಿಗೆ ಹೇಳುವುದರ ಮೂಲಕ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ,ಗೌರವವನ್ನು ಬೆಳೆಸಿಕೊಳ್ಳುವ ಕುರಿತು ಉತ್ತಮ ಸಂದೇಶ ನೀಡಿದರು.ಅದೇ ರೀತಿಯಾಗಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯ ಮಕ್ಕಳಿಗೆ ರಂಗೋಲಿ ಮತ್ತು ಹಾಡಿನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು . ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶಾಲೆಯ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ವಿತರಿಸಿದರು. ಸಮಾರಂಭದಲ್ಲಿ ಆಡಳಿತ ಮಂಡಳಿ ಸದ್ಯಸ ಕೆ . ಎಲ್.ದಶವಂತ, ಶಾಲೆಯ ಮುಖ್ಯ ಗುರುಮಾತೆ ನಿವೇದಿತಾ ರೊಡಗಿ , ಶಾಲಾ ಶಿಕ್ಷಕಿಯರಾದ ಕೀರ್ತಿ ಚಿಮ್ಮಲಗಿ, ಪ್ರತಿಭಾ ಚಲವಾದಿ, ಕಾಜಲ್ ಲಮಾಣಿ, ವೀಣಾ ಹೊನ್ನಾವರ, ಸುಶ್ಮಿತಾ ಬಿರಾದಾರ ,ಶಿಲ್ಪಾ ಕೋಲ್ಹಾರ ಸೇರಿದಂತೆ ಶಾಲಾ ಆಡಳಿತ ಮಂಡಳಿ ಸದಸ್ಯರು, ಪಾಲಕರು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Share this