ಸಪ್ತಸಾಗರ ವಾರ್ತೆ, ವಿಜಯಪುರ,ನ. 5: ರಾಮಾಂಬುಜ ಮೂವೀಸ್ ಮಾತಾಂಬುಜ ಮೂವೀಸ್ ಸಹಕಾರದೊಂದಿಗೆ ಶ್ರೀ ಕಾಖಂಡಕಿ ಮಹಿಪತಿದಾಸರು ಚಲನಚಿತ್ರವು ಕೊನೆಯ ಹಂತದ ಚಿತ್ರಿಕರಣ ಬುಧವಾರ ನೆರವೇರಿತು.
ನಗರದ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಸುಂದರೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಣ ಆರಂಭಗೊಂಡಿತು.
ನಗರದ ಖ್ಯಾತ ವೈದ್ಯ ಡಾ. ರಾಘವೇಂದ್ರ ಸಾವಳಗಿ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆಯ ಹಿಂದಿನ ಸದಸ್ಯೆ ಮೀನಾಕ್ಷಿ ಸಾವಳಗಿ ದಂಪತಿಗಳು ಚಿತ್ರೀಕರಣಕ್ಕೆ ಪೂಜೆ ಸಲ್ಲಿಸಿ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ಚಲನಚಿತ್ರಕ್ಕೆ ಖ್ಯಾತ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ಜೆ.ಎಂ. ಪ್ರಲ್ಹಾದ ರಚಿಸಿರುವರು. ಸಂಗೀತವನ್ನು ಡಾ. ಮಧುಸೂದನ ಹವಾಲ್ದಾರ ನೀಡಿರುವರು.
ತಾರಾಗಣದಲ್ಲಿ ಪ್ರಮುಖ ಪಾತ್ರಧಾರಿಯಾಗಿ ವಿಜಯಾನಂದ ನಾಯಕ್ ಸೇರಿದಂತೆ ಚಾಂದಿನಿ ಘರ್ತಿಕೆರೆ, ರಘುನಾಥ್,ಲಕ್ಷ್ಮಿ ಶ್ರಯಾಂಶಿ, ಅನೀಶ ಮುಂತಾದವರಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಕ್ಯಾಮೆರಾ-ಸಿ ನಾರಾಯಣ,ಸಂಕಲನ-ದೊರೆರಾಜ್,ವಿ ಎಫ್ ಎಕ್ಸ್ ಕಣ್ಣನ್, ಮುಖ್ಯ ಸಹಾಯಕ ನಿರ್ದೇಶಕರಾಗಿ ಬರಗೂರು ಅಕ್ಷಯ್ ಕುಮಾರ್, ಬಾಬಿ, ರಾಮಚಂದ್ರ , ಕಲಾ ನಿರ್ದೇಶನ ಸಿರಿವಾಳ ರಾಘವೇಂದ್ರ ಅವರದು ಇದೆ. ಅನೇಕ ದಾಸವರೇಣ್ಯರ ಇತಿಹಾಸವನ್ನು ಚಲನಚಿತ್ರವಾಗಿ ಮಾಡಿದ ಖ್ಯಾತಿಯ ನಿರ್ದೇಶಕ ಮಧುಸೂದನ ಹವಾಲ್ದಾರ ನಾಳೆಯಿಂದ ಮುಂದಿನ ಮೂರು ದಿನಗಳ ಕಾಲ ಬಸವನ ಬಾಗೇವಾಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಪೌರಾಣಿಕ ಹಿನ್ನೆಲೆಯ ಮುತ್ತಗಿ ಗ್ರಾಮ ಪುರಾತನ ದೇವಾಲಯದ ಆವರಣದ ಕೊಳದ ಹಾಗೂ ಸುತ್ತಮುತ್ತಲೂ ಮುಂದುವರೆಸಲಿರುವರು.
ಐದು ದಿನಗಳ ಶೂಟಿಂಗ್ ಬಾಕಿ ಇದ್ದು ಇದರ ಪೋಸ್ಟ್ ಪ್ರೊಡಕ್ಷನ್ ಕಾರ್ಯಕ್ರಮ ಆದಷ್ಟು ಬೇಗ ಮುಗಿಸಿ ಬಿಡುಗಡೆಗೆ ಸಿದ್ಧ ವಾಗುತ್ತಿದೆ ಎಂದವರು ತಿಳಿಸಿದರು.
ಚಿತ್ರೀಕರಣದ ಸಂದರ್ಭದಲ್ಲಿ ಖ್ಯಾತ ನೇತ್ರ ತಜ್ಞ ಡಾ. ಉಪೇಂದ್ರ ನರಸಾಪೂರ- ಡಾ. ವನಜಾ ನರಸಾಪೂರ, ಸಾಹಿತಿ ಪ್ರಿಯಾ ಪ್ರಾಣೇಶ ಹರಿದಾಸ, ಕಾಖಂಡಕಿಯ ಹರಿದಾಸ ಪರಿವಾರದವರು, ರಂಗ ಕರ್ಮಿ ಅಂಬಾದಾಸ ಜೋಶಿ, ಛಾಯಾಚಿತ್ರಗಾರ ಸುನೀಲಕುಮಾರ ಸುಧಾಕರ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನಗರದಲ್ಲಿ ಮಹಿಪತಿದಾಸರ ಚಲನಚಿತ್ರದ ಕೊನೆಯ ಹಂತದ ಚಿತ್ರೀಕರಣ


