ಶ್ರೀ ಸಿದ್ಧಲಿಂಗನ ಸನ್ನಿದಾನದಲ್ಲಿ ಕಾರ್ತಿಕ ದೀಪೋತ್ಸವ

ಸಪ್ತಸಾಗರ ವಾರ್ತೆ, ಇಂಡಿ, ನ. 8: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಕೈವಲ್ಯಧಾಮ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಿತ್ಯ ಸಂಜೆ ದೀಪೋತ್ಸವ ನಡೆಯುತಿದೆ. ಈ ನಿಮಿತ್ಯ ಶುಕ್ರವಾರ ಸಂಜೆ ಭಕ್ತರು ಮಣ್ಣಿನ ಪಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ತೈಲದ ದೀಪದಲ್ಲಿ ಸ್ವಸ್ಥಿಕ್ ಚಿತ್ರ, ಲಿಂಗದ ಚಿತ್ರ, ಓಂ ನಮ: ಶಿವಾಯ ಎಂಬ ಶಿವನಾಮ, ಶ್ರೀ ಸಿದ್ಧಲಿಂಗನ ನಾಮಸ್ಮರಣೆ, ಗುರು ಬಂಥನಾಳ ಶಿವಯೋಗಿಗಳ ನಾಮಸ್ಮರಣೆ ಮಾಡಿದರು.
ಮಹಿಳೆಯರು ಮಕ್ಕಳು ಆದಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮದಿಂದ ದೀಪ ಬೆಳಗಿ ಪೂಜಾ ಕಾರ್ಯ ನೆರವೇರಿಸಿ ಸಂಭ್ರಮಸಿದರು. ಈ ಹಿನ್ನಲೆ ಮಠದಲ್ಲಿ ಮಕ್ಕಳ ಸಂಭ್ರಮ ಮನೆ ಮಾಡಿತ್ತು. ಬಳಿಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕಳೆದ ದೀಪಾವಳಿಯಿಂದ ಆರಂಭವಾದ ಈ ಕಾರ್ತಿಕ ದೀಪೋತ್ಸವವು ಬರುವ ಛಟ್ಟಿ ಅಮಾವಾಸ್ಯೆಯ ವರೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಇಲ್ಲಿನ ಶ್ರೀ ಸಂಗನಬಸವೇಶ್ವರ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ಚಂದು ರಾಜಣ್ಣವರ, ಸಾಯಬಣ್ಣ ವರವಂಟಿ, ಜಟ್ಟು ಪೂಜಾರಿ, ಚನ್ನವೀರ ಹೆಗ್ಗುಂಡೆ, ಸಮರ್ಥ ಕೋಳಿ, ಸಿದ್ದರಾಮ ಜವಳಗಿ, ಸಿದ್ದು ತೋಳನೂರ, ಸಂಜೀವ ಕಟ್ಟಿಮನಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲ ಗ್ರಾಮಗಳಾದ ಪಡನೂರ, ಬರಗೂಡಿ, ಲೋಣಿ ಕೆ.ಡಿ. ಆಳೂರ, ಗ್ರಾಮದ ಭಕ್ತರು ಹಲವು ಭಾಗವಹಿಸಿದ್ದರು.

Share this