16ರಂದು ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 13: ನಗರದಲ್ಲಿ ಡಿಸೆಂಬರ್ 7 ರಂದು ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು ಮತ್ತು ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ನವೆಂಬರ್ 16 ರಂದು ರವಿವಾರ ಬೆ.10ಗಂ. ನಗರದ ಗಗನ ಮಹಲ ಉದ್ಯಾನದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಾಥಮಿಕ ವಿಭಾಗ, ಹೈಸ್ಕೂಲು ವಿಭಾಗ ಹಾಗೂ ಪಿಯು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ.
ವಿಜಯಪುರ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಇದಾಗಿದೆ. 21 ಕಿ. ಮೀ. ಓಟಗಾರು ಸಾಗುವ ಮಾರ್ಗದಲ್ಲಿ ಬರುವ ಗೋಳಗುಮ್ಮಟ, ಸುಂದರೇಶ್ವರ ಮಂದಿರ, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾಕಮಾನ, ಇಬ್ರಾಹಿಂ ರೋಜಾ, ಸೈನಿಕ ಶಾಲೆ, ಬಿ.ಎಲ್.ಡಿ.ಇ ಸಂಸ್ಥೆ ಶಾಲೆಗಳು, ಜ್ಞಾನಯೋಗಾಶ್ರಮ, ಶ್ರೀ ಸಿದ್ಧೇಶ್ವರ ದೇವಸ್ಥಾನ ವಿಜಯಪುರ ನಗರದ ಸ್ಮಾರಕಗಳ ಮಹತ್ವ ಸಾರುವ ಚಿತ್ರಗಳನ್ನು ಬಿಡಿಸಬೇಕು. ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ರೂ. 10000, ದ್ವಿತೀಯ ರೂ. 7 ಸಾವಿರ, ತೃತಿಯ ರೂ. 5000 ಹಾಗೂ ಇಬ್ಬರಿಗೆ ತಲಾ ರೂ. 2500 ಸಮಾಧಾನಕರ ಬಹುಮಾನ ನೀಡಲಾಗುವುದು.
ನಿಬಂಧ ಸ್ಪರ್ಧೆ : ನವೆಂಬರ್ 23 ರಂದು ರವಿವಾರ ಬೆ.10ಗಂ. ಗಗನ್ ಮಹಲ್ ಉದ್ಯಾನದಲ್ಲಿ ಪ್ರಾಥಮಿಕ, ಹೈಸ್ಕೂಲು ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೂರು ವಿಭಾಗಗಳಲ್ಲಿ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ. ನೂರು ವರ್ಷಗಳ ಬ್ರಿಟಿಷ ದಾಖಲೆಯಲ್ಲಿ ಬರದ ಜಿಲ್ಲೆ ಎಂದು ಹೆಸರಾಗಿದ್ದ ವಿಜಯಪುರ ಜಿಲ್ಲೆ ಪರಿಸ್ಥಿತಿ ಇದೀಗ ಬದಲಾಗಿದ್ದು, ಇಲ್ಲಿನ ಹಸಿರು ವಾತಾವರಣ, ವೃಕ್ಷ ಆಂದೋಲನ, ಶುದ್ಧ ಗಾಳಿಯಲ್ಲಿ ವಿಜಯಪುರ, ಪರಿಸರ ಕುರಿತು ಜನಜಾಗೃತಿ ಇತ್ಯಾದಿ ಪರಿಸರ ಪೂರಕ ವಿಷಯಗಳ ಸ್ಪರ್ಧೆ ಇದಾಗಿದೆ. ಈ ವಿಭಾಗದಲ್ಲಿಯೂ ಪ್ರಥಮ ಸ್ಥಾನ ರೂ. 10000, ದ್ವಿತೀಯ ರೂ. 7000, ತೃತೀಯ ರೂ. 5000 ಹಾಗೂ ಎರಡು ಸಮಾಧಾನಕರ ಬಹುಮಾನ ತಲಾ ರೂ. 2500 ನೀಡಲಾಗುವುದು.
ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಒಂದೇ ಅಳತೆಯ ಪೇಪರ್ ಮಾತ್ರ ಒದಗಿಸಲಾಗುವುದು. ಬಣ್ಣ ಮತ್ತು ಬ್ರಶ್ ಗಳನ್ನು ವಿದ್ಯಾರ್ಥಿಗಳು ತರಬೇಕು.
ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಗಳ ಸಂಘಟಕರಾದ ಶಿವು ಕುಂಬಾರ- 9972795289 ಮತ್ತು ರಮೇಶ ಬಿರಾದಾರ- 9972025236 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Share this