ಮಕ್ಕಳ ಸೇವೆ ಮಾಡುವುದು ಅತ್ಯಂತ ಪುಣ್ಯದ ಕೆಲಸ: ಪ್ರೊ. ಕೊಳಮಲಿ

ಸಪ್ತಸಾಗರ ವಾರ್ತೆ ವಿಜಯಪುರ, ನ. 14:
ಹೂವಿನ ಹಾಗೆ ಅರಳುವ ಮುದ್ದು ಸ್ವಭಾವದ ನಿಷ್ಕಲ್ಮಶ ಮನಸ್ಸುಳ್ಳ ಮಕ್ಕಳೇ ದೇವರು, ಮಕ್ಕಳ ಸೇವೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕಾರ್ಯ ಎಂದು ಚೇತನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಹೇಳಿದರು.
ಶುಕ್ರವಾರ ಚೇತನಾ ಶಿಕ್ಷಣ ಸಂಸ್ಥೆ ಚೇತನಾ ಅಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿಯವರು ಮಾತನಾಡಿ, ಮಕ್ಕಳು ಒಳ್ಳೆ ರೀತಿ ಅಧ್ಯಯನವನ್ನು ಮಾಡಿ ತಮ್ಮ ಜ್ಞಾನದಿಂದ ಈ ಜಗವನ್ನ ಬೆಳಗಬೇಕೆಂದು ಹೇಳಿದರು.
ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳೇ ಕಾರ್ಯಕ್ರಮದ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿದ್ದು ಕಾರ್ಯಕ್ರಮಕ್ಕೆ ಅತ್ಯಂತ ಮೆರಗು ಬಂತು.
ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.
ಸಂಸ್ಥೆ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ. ನಾಗರಾಜ ಹೇರಲಗಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ್ ಕುಲಕರ್ಣಿ, ಸಂಯೋಜಕಿ ಹೇಮಾ ಪಾಟ್ನೆ ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share this