ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರ ಮಹತ್ವದ್ದಾಗಿದೆ-ಜಿಪಂ ಸಿಇಒ ರಿಷಿ ಆನಂದ

ಸಪ್ತಸಾಗರ ವಾರ್ತೆ ವಿಜಯಪುರ,ನ.14: ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಸಮುದಾಯದ‌ ಭಾಗವಹಿಸುವಿಕೆಯು ಅತ್ಯಂತ ಮಹತ್ವದ್ದಾಗಿದ್ದು, ಮಕ್ಕಳ ಶೈಕ್ಷಣಿಕ ಉನ್ನತಿಗೆ ಪಾಲಕರ ಪಾತ್ರ ಬಹು ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ‌ ಅವರು ಹೆಳಿದರು.
ನಗರದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 49ರ ಅಫಜಲಪುರ ಟಕ್ಕೆ ವಿಜಯಪುರ ನಗರ ವಲಯದ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಹಾಗೂ ಶಾಲಾ ಪೋಷಕರ-ಶಿಕ್ಷಕರ ಮಹಾ ಸಭೆಯಲ್ಲಿ ಅವರು ಪಾಲ್ಗೊಂಡು ಸರಕಾರಿ ಶಾಲೆಗಳಲ್ಲಿ ಹಮ್ಮಿಕೊಂಡ ವಿಶೇಷ ಮಹಾ ಪೋಷಕರ ಸಭೆಗೆ ಅಫಜಲಪುರ ಟಕ್ಕೆಯ ಬಹತೇಕ ಎಲ್ಲ ಪಾಲಕರು ಪಾಲ್ಗೊಂಡು ತಮ್ನ ಮಗುವಿನ ಶೈಕ್ಷಣಿಕ ಪ್ರಗತಿ ತಿಳಿದುಕೊಳ್ಳಲು ಇದೊಂದು ಸದಾವಕಾಶ‌ ಒದಗಿಸಿದೆ ಎಂದು ತಿಳಿಸಿದರು.
ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು ಎಂಬಂತೆ ಮಕ್ಕಳು ಶಾಲೆಯಲ್ಲಿ ಕಲಿತ ದೈನಂದಿನ ವಿಷಯಗಳ‌ ಕುರಿತಾಗಿ, ಪಾಲಕರು ಮಕ್ಕಳೊಂದಿಗೆ ಬೆರೆತು ಪ್ರೋತ್ಸಾಹಿಸಬೇಕು. ಮಗು ಮತ್ತಷ್ಟು ಪ್ರೇರಣೆ ಹೊಂದಿ, ತನ್ನ ಕಲಿಕೆಯಲ್ಲಿ ಉತ್ಸುಕತೆ ತೋರಿ, ವಿಷಯ ಕರಗತ ಮಾಡಿಕೊಳ್ಳಲು ಪಾಲಕರ ಕಾಳಜಿ ಅತ್ಯಂತ ಅವಶ್ಯವಿದೆ. ಸರಕಾರಿ ಶಾಲೆಗಳಲ್ಲಿ ಶೇ.ನೂರರಷ್ಟು ಹಾಜರಾತಿ ಇತಬೇಕು ಮತ್ತು ಶಾಲೆಗೆ ಆಗಮಿಸಿದ ಪ್ರತಿ ಮಗು ಅತ್ಯಂತ ಉತ್ಸಾಹದಿಂದ ಕಲಿಕೆಯಲ್ಲಿ ಭಾಗವಹಿಸಲು ಶಿಕ್ಷಕರ ಕಲಿಕಾ ಬೋಧನೆ ಪರಿಣಾಮಕಾರಿಯಾಗಲು ಕಲಿಕಾ ಬೋಧನಾ ಅಂಶಗಳು ಸಮ್ಮಿಳಿತಗೊಳಿಸಿ ಬೋಧನೆ ಮಾಡಬೇಕು. ಇಲಾಖೆಯಿಂದ ಪ್ರತಿ ತಿಂಗಳು ಪಾಲಕರ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಪಾಲಕರು ಈ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದರು.
ಶುಕ್ರವಾರ ಹಮ್ಮಿಕೊಂಡ ಮಹಾಸಭೆಯು ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆ ಮತ್ತು ಸರಕಾರಿ ಕಾಲೇಜಿನಲ್ಲಿ ಏಕಕಾಲಕ್ಕೆ ನಡೆಯುತ್ತಿದೆ.ಇದರ ಮುಖ್ಯ ಉದ್ದೇಶ ಸರಕಾರ ಶಿಕ್ಷಣಕ್ಕಾಗಿ ಒದಗಿಸುತ್ತಿರುವ ಸೌಲಭ್ಯಗಳ ಮಾಹಿತಿ ಪಾಲಕರು ಹೊಂದಬೇಕು. ಜೊತೆಗೆ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಮತ್ತು ಪಾಲಕರ ಹಾಗೂ ಜವಾಬ್ದಾರಿ ಕುರಿತ ಮಾಹಿತಿ ವಿನಿಮಯ ಮಾಡಿಕೊಳ್ಳುವುದಾಗಿದೆ ಎಂದರು.
ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣನ್ನು ಒದಗಿಸಲಾಗುತ್ತಿದೆ. ಪಾಲಕ – ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಪ್ರತಿದಿನ ಶಾಲೆಗೆ ಕಳುಹಿಸಬೇಕು ಎಂದು ಪಾಲಕರಿಗೆ ತಿಳಿಸಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಮತ್ತು ಉನ್ನತ ಹುದ್ದೆ ಪಡೆದುಕೊಳ್ಳಬೇಕು.
ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ
ಆರ್.ವ್ಹಿ. ಹೊಸೂರ ಮಾತನಾಡಿ, ಪಾಲಕ-ಪೋಷಕ-ಶಿಕ್ಷಕರ ಮಹಾಸಭೆಯ ಉದ್ದೇಶಗಳಾದ ಮಕ್ಕಳ ಶೈಕ್ಷಣಿಕ ಪ್ರಗತಿ , ಹಾಜರಾತಿ , ಸಿ.ಸಿ.ಇ, ಎಲ್.ಬಿ.ಎ ಮತ್ತು ಎಫ್.ಎಲ್.ಎನ್ ಕುರಿತು ಮತ್ತು ಕಲಿಕಾ ಉಪಕರಣ ಪೋಷಕರ ಜವಾಬ್ದಾರಿಗಳು ಹಾಗೂ ಭಾಗವಹಿಸುವಿಕೆ ಮಕ್ಕಳ ಪರಿಣಾಮಕಾರಿ ಕಲಿಕೆಯಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷ
ಯೋಗೆಶಕುಮಾರ ನಡುವಿನಕೇರಿ ಮಾತನಾಡಿ, ನಮ್ಮ ಶಾಲೆಯಲ್ಲಿ ಈಗಾಗಲೇ ಕನ್ನಡ ಮತ್ತು ಆಂಗ್ಲ ಮಾಧ್ಯಮದ ತರಗತಿಗಳು ನಡೆಯುತ್ತಿದೆ. ಇಂದು ನಡೆದ ಪಾಲಕ ಪೋಷಕರು ಮತ್ತು ಶಿಕ್ಷಕರ ಮಹಾ ಸಭೆಗೆ ಬಹಳ ಜನ ಪಾಲಕರು ಭಾಗವಹಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಕರಿಗೆ ಮತ್ತು ಸಾಧನೆಗೈದ ವಿದ್ಯಾರ್ಥಿಗಳಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಲ್ತಾಫ ಇಟಗಿ, ಶಾಲೆಯ ಮುಖ್ಯ ಗುರುರುಗಳಾದ ಚಂದ್ರಕಾಂತ ಕನಸೆ, ಎ.ಕೆ. ದಳವಾಯಿ, ಶಿಕ್ಷಣ ಸಂಯೋಜಕ ರಾಜು ಮಸೂತಿ, ಬಿ. ಆರ್. ಪಿ, ಬಸವರಾಜ ಪಡಗಾನೂರ, ಸಿ. ಆರ್. ಪಿ, ಮತ್ತು ಎಸ್ ಬಿಐ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ ಸೇರಿದಂತೆ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಸದಸ್ಯರು, ಅಫಜಲಪುರ ಟಕ್ಕೆ ನಿವಾಸಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುರುಗಳಾದ ಚಂದ್ರಕಾಂತ ಕನಸೆ ಸ್ವಾಗತಿಸಿದರು. ಮಲ್ಲಯ್ಯ ಸ್ವಾಮಿ ಶಿಕ್ಷಕರು ವಂದಿಸಿದರು ಹಾಗೂ ಸವಿತಾ ತಿಗಡಿ ನಿರೂಪಿಸಿದರು.

Share this