ಮಹಿಳೆಯಿಂದ ಯುವಕನ ಕೊಲೆ

ಸಪ್ತಸಾಗರ ವಾರ್ತೆ ವಿಜಯಪುರ, ನ. 17:
ಮಹಿಳೆಯೊಬ್ಬಳು ಯುವಕನನ್ನು ಕತ್ತು ಹಿಚುಕಿ ಕೊಲೆ ಮಾಡಿದ ಘಟನೆ ನಗರದ ಜುಮ್ಮಾ ಮಸೀದಿ ಬಳಿಯ ಅಮನ್ ಕಾಲೋನಿಯಲ್ಲಿ ನಡೆದಿದೆ.
ಸಮೀರ್ ಉರ್ಫ ಪಿಕೆ ಇನಾಂದಾರ್ (26) ಕೊಲೆಯಾದ ಯುವಕ.
ಲೀವಿಂಗ್ ರಿಲೇಷನ್ ನಲ್ಲಿದ್ದ ಮಹಿಳೆಯಿಂದ ಪ್ರಿಯಕರನ‌ ಕೊಲೆ ನಡೆದಿದ್ದು, ಸಹೋದರನ‌ ಸಹಾಯದಿಂದ ಲೀವಿಂಗ್ ರಿಲೇಷನ್ ನಲ್ಲಿದ್ದ ವ್ಯಕ್ತಿಯ ಕೊಲೆಯಾಗಿದೆ. ತಯ್ಯಬಾ ಬಾಗವಾನ್ ಎಂಬ ಮಹಿಳೆಯಿಂದ ಈ ಕೃತ್ಯ ನಡೆದಿದೆ.
ತಯ್ಯಾಬಾ ಸಹೋದರ
ಅಸ್ಲಮ್ ಬಾಗವಾನ್ ಸಹಾಯದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಸಮೀರ್ ನ ಕಿರುಕುಳದಿಂದ ಬೇಸತ್ತು ಮಹಿಳೆ ಕೊಲೆ ಮಾಡಿದ್ದಾಗಿ ಮಾಹಿತಿ ಗೊತ್ತಾಗಿದೆ.
ಸ್ಥಳಕ್ಕೆ ಗೋಲಗುಂಬಜ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮೀರ್ ನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Share this