ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿಯವರ ೧೦೮ನೇ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 19:
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ೧೦೮ನೇ ಜಯಂತಿಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.
ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು, ಇಂದಿರಾಗಾಂಧಿಯವರು ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರಧಾನ ಮಂತ್ರಿಯಾಗಿದ್ದರು. ತಮ್ಮ ಅವಧಿಯಲ್ಲಿ ಅವರು ಮಾಡಿದಂತಹ ಕಾರ್ಯಗಳು ಎಂದೆಂದಿಗೂ ಅಜರಾಮರವಾಗಿರುತ್ತವೆ. ದೀನದಲಿತರಿಗೆ, ಬಡವರಿಗೆ, ಮಹಿಳೆಯರಿಗೆ, ಸೈನಿಕರಿಗೆ, ರೈತರಿಗೆ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡಿದ್ದಾರೆ. ಉಳುವವನೇ ಭೂಮಿ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಗಳ ಮೂಲಕ ಭಾರತವನ್ನು ಸ್ವಾವಲಂಬನೆಯತ್ತ ಕೊಂಡೊಯ್ದ ಮಹಾನ್ ನಾಯಕಿಯಾಗಿದ್ದರು. ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮೇಜಾ ನದಾಫ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಮಹಾದೇವಿ ಗೋಕಾಕ, ಡಾ. ಗಂಗಾಧರ ಸಂಬಣ್ಣಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೀಲ ಬಾಗಮಾರೆ, ಪ್ರಚಾರ ಸಮಿತಿ ಅಧ್ಯಕ್ಷ ಸರಫರಾಜ ಮಿರ್ದೆ, ಬೀದಿ ವ್ಯಾಪಾರಸ್ಥರ ಘಟಕದ ಅಧ್ಯಕ್ಷ ಲಾಲಸಾಬ ಕೊರಬು, ಜಿಲ್ಲಾ ಖಜಾಂಚಿ ವಿಜಯಕುಮಾರ ಘಾಟಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೋಡೆ, ದೇಸು ಚವ್ಹಾಣ, ಶರಣಪ್ಪ ಯಕ್ಕುಂಡಿ, ಇಂಡಿ ಬ್ಲಾಕ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ, ರಾಜ್ಯ ಕಿಸಾನ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಹೆಚ್. ಕಲಾಲ, ಮಹಿಬೂಬ ಕಲಾದಗಿ, ಇಲಿಯಾಸ ಅಹ್ಮದ ಸಿದ್ಧಕಿ, ಅಬೂಬಕರ ಕಂಬಾಗಿ, ಗುಲಾಬ ಚವ್ಹಾಣ, ಕೃಷ್ಣಾ ಲಮಾಣಿ, ಆನಂದ ಜಾಧವ, ಭಾರತಿ ಹಡಪದ, ರುಕ್ಮೀಣಿ ಚವ್ಹಾಣ,
ತಾಜುದ್ದೀನ ಖಲೀಫಾ, ಸರಫರಾಜ ಅಗಸಬಾಳ, ರುಬಿನಾ ಹಳ್ಳೂರ, ದೇಸು ಚವ್ಹಾಣ, ಗಂಗವ್ವ ಕನುಮನಾಳ, ಸಮೀನಾ ಅಕ್ಕಲಕೋಟ, ಸಿದ್ದು ಹಡಪದ, ಸೋಮು ಚನಗೊಂಡ, ಶೀಲವಂತ ಇಂಡಿ, ಕಾಶೀಬಾಯಿ ಹಡಪದ, ಬಿ.ಎಮ್. ಮಕ್ತೇದಾರ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Share this