ಸಪ್ತಸಾಗರ ವಾರ್ತೆ, ವಿಜಯಪುರ, ನ. 20:
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾಗಿ ಸಾಹಿತಿ ಪ್ರೊ ಅಡವಿಸ್ವಾಮಿ ಕೊಳಮಲಿ ಸೇರಿದಂತೆ ಜಿಲ್ಲೆಯ ಹತ್ತು ಜನ ಸದಸ್ಯರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯದ ಜಾಗೃತಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ, ಮಾನಸ ಅವರು ಇಂದು ವಿಜಯಪುರದ ತೊರವಿ ರಸ್ತೆಯಲ್ಲಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣೆ ಸಮಾರಂಭದಲ್ಲಿ ಅರ್ಹತಾ ಪ್ರಮಾಣ ಪಾತ್ರವನ್ನು ವಿತರಿಸಿದರು.
ಜಿಲ್ಲಾ ಸಂಚಾಲಕರಾಗಿ ಶಂಕರ ಬೈಚಬಾಳ, ಸದಸ್ಯರನ್ನಾಗಿ ಪ್ರೊ ಅಡವಿಸ್ವಾಮಿ ಕೊಳಮಲಿ,ಪರಶುರಾಮ ಶಿವಶರಣ, ಸುಜ್ಞಾನಿ ದೇವಿ ಪಾಟೀಲ್, ಆರ್ ಡಿ ಮಾಳಗಿ, ಸೋಮಲಿಂಗ ಎಚ್. ಹಿಪ್ಪರಗಿ, ಲಾಲಸಾಬ ಮೇಲಿನಮನಿ,
ಬಸವರಾಜ ಸಲೋಡಗಿ, ಸಿದ್ದರಾಮ ಯರನಾಳ, ದೇವದಾಸ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾಗಿ ಸಾಹಿತಿ ಪ್ರೊ, ಅಡವಿಸ್ವಾಮಿ ಕೊಳಮಲಿ ನೇಮಕ


