ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಮುರುಗೋಡಕ್ಕೆ ಪಾದಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 20 : ಶ್ರೀ ಕ್ಷೇತ್ರ ಕೆಂಗೇರಿ ಮುರಗೋಡದಲ್ಲಿ ಶ್ರೀ ಶಿವ ಚಿದಂಬರ ಮಹಾಸ್ವಾಮಿಗಳ ೨೬೭ ನೇ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವ ನ.೨೬ ರಂದು ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೊಳ್ಳಲು ನಗರದ ಚಿದಂಬರ ದೇವಸ್ಥಾನದಿಂದ ಭಕ್ತರು ಪಾದಯಾತ್ರೆ ಬೆಳೆಸಿದರು.
ನಗರದ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯಲ್ಲಿ ತೆರಳಿದ ಭಕ್ತರು ವಿಜಯಪುರ ನಗರದಿಂದ ಹಲಗಣಿ, ಮುಧೋಳ, ಯರಗಟ್ಟಿ, ಹಲಕಿ ಕ್ರಾಸ್ ಮೂಲಕ ನ. ೨೬ ಕ್ಕೆ ಶ್ರೀ ಕ್ಷೇತ್ರ ತಲುಪಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಸಂಚಾಲಕ ರಾಘವೇಂದ್ರ ಜೋಶಿ, ಸಹ ಸಂಚಾಲಕ ಸುಧೀಂದ್ರ ಕುಲಕರ್ಣಿ, ವೆಂಕಟೇಶ ಜೋಶಿ, ಸಚಿನ ಆಚಾರ್ಯ, ವೆಂಕಟೇಶ ಜೋಶಿ (ನಂದವಾಡಗಿ), ಚಿದಂಬರ ಜೋಶಿ, ರೊಳ್ಳಿ, ಲಕ್ಷ್ಮಿಕಾಂತ ಕುಲಕರ್ಣಿ, ಶ್ರೀಧರ ಕುಲಕರ್ಣಿ, ಕೃಷ್ಣಾ ಜೋಶಿ, ಸಂಜು ಬರಡೋಲ, ಕಲ್ಪನಾ ಜೋಶಿ, ಜ್ಯೋತಿ ಕುಲಕರ್ಣಿ, ಲಕ್ಷ್ಮಿ ಜೋಶಿ, ಸ್ನೇಹಾ ಜೋಶಿ, ಸಹನಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ರೇಣುಕಾ ಮರುಮಕಾನೆ, ಚಿದಂಬರ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮಿಕಾಂತ ಕುಲಕರ್ಣಿ,ಗೋವಿಂದ ಜೋಶಿ, ವಿಜಯ ಜೋಶಿ, ದೀಪಕ ಜೋಶಿ, ರಾಘವೇಂದ್ರ ಕುಲಕರ್ಣಿ, ನಾಗರಾಜ ಜೋಶಿ, ಉದಯ ಔರಸಂಗ, ಸಂದೀಪ ಕುಲಕರ್ಣಿ, ಪವನ ಜೋಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this