ಸಪ್ತಸಾಗರ ವಾರ್ತೆ, ವಿಜಯಪುರ, ನ.೨೦: ಇಲ್ಲಿಯ ನಾಟ್ಯಕಲಾ ನೃತ್ಯ ಅಕಾಡೆಮಿ ತಂಡ ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ದೇಶದ ಹಿರಿಮೆಯನ್ನು ಹೆಚ್ಚಿಸಿದೆ.
ನವೆಂಬರ್ ೧೫ರಿಂದ ೧೮ ರ ವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ನೃತ್ಯ ಸಮರ್ಪಣ- ೨೦೨೫ ಉತ್ಸವದಲ್ಲಿ ತಂಡದ ಸದಸ್ಯರು ರೋಮಾಂಚನಕಾರಿ ನೃತ್ಯ ಪ್ರದರ್ಶನ ನೀಡಿದರು.
ತಂಡದ ಸದಸ್ಯೆ ಸಾನ್ವಿ ದೊಡಮನಿ ಅವರು ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಸನ್‌ಫೊ ಗ್ಲೋಬಲ್ ಫೆಡರೇಶನ್ ಸಸ್ಟೇನಬಿಲಿಟಿ ಕಲ್ಚರಲ್ ಡಿಪ್ಲೊಮಸಿ ಪ್ರಶಸ್ತಿ (ಯುನೈಟೆಡ್ ರಿಪಬ್ಲಿಕ್ ಆಫ್ ಇಂಡಿಯಾ ಮತ್ತು ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾ) ಯನ್ನು ಪ್ರದಾನ ಮಾಡಲಾಯಿತು.
ಯಶಸ್ವಿಯಾಗಿ ಪ್ರತಿನಿಧಿಸಲ್ಪಟ್ಟ ಮತ್ತು ಪ್ರದರ್ಶನಗೊಂಡ ಅಕಾಡೆಮಿಯ ಉದಯೋನ್ಮುಕ ತಾರೆಗಳಲ್ಲಿ ರವಿನ್ಯಾ ಭಾಗಿ, ರಕ್ಷಾ ಮುಚ್ಚಂಡಿ, ಸಿಯಾ ಹಿರೇಮಠ, ಸಾನ್ವಿ ದೊಡ್ಮನಿ, ಗುರುಮಾತೆ ಲಕ್ಷ್ಮಿ ತೇರದಾಳಮಠ ಮತ್ತು ಕರುಣಾ ಬಂಬೈರೆ ಇದ್ದರು.
ಶ್ರೀಲಂಕಾದಲ್ಲಿ ವಿಜಯಪುರದ ನಾಟ್ಯಕಲಾ ನೃತ್ಯ ಅಕಾಡೆಮಿ ತಂಡದ ನೃತ್ಯ ಪ್ರದರ್ಶನ


