ಪಂಚಮಸಾಲಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ವೀರಭದ್ರಪ್ಪ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 23:
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ವಿಜಯಪುರದ ನೂತನ ಅಧ್ಯಕ್ಷರಾಗಿ ವೀರಭದ್ರಪ್ಪ ಆಯ್ಕೆಯಾಗಿದ್ದಾರೆ.
ರವಿವಾರ ನಡೆದ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಶಶಿಧರ ಸಾತಲಗಾಂವ ಜಿಲ್ಲಾಧ್ಯಕ್ಷರಾಗಿ ವೀರಭದ್ರಪ್ಪ, ಉಪಾಧ್ಯಕ್ಷರಾಗಿ ಎಸ್. ಬಿ. ಪಾಟೀಲ್,ಆರ್. ಡಿ. ಬಾಳಿ, ಕಾರ್ಯಾಧ್ಯಕ್ಷರಾಗಿ ಈರಣ್ಣ ಹೊಸಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಉಗಾರ ಅವರು ಆಯ್ಕೆಯಾದರು.
ಸಭೆಯಲ್ಲಿ ಇಂಡಿ ನೌಕರರ ಸಂಘದ ಅಧ್ಯಕ್ಷ ಬಿ. ಎ. ರಾವೂರ, ಬಸವನ ಬಾಗೇವಾಡಿಯ, ಶಿವಾನಂದ ಮಂಗಾನವರ, ಚಡಚಣದ ಎಸ್. ಬಿ. ಪಾಟೀಲ, ಸಿಂದಗಿಯ ಮಹಾಂತೇಶ ಯಡ್ರಾಮಿ, ಆಲಮೇಲದ ರವಿ ಬಿರಾದಾರ, ದೇವರಹಿಪ್ಪರಗಿಯ ನಾಗೇಶ ನಾಗೂರ, ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಶಿವರಾಜ್ ಬಿರಾದಾರ, ರಾಜಶೇಖರ್ ದೈವಾಡಿ, ಎಸ್. ಎನ್.ಪಡಶೆಟ್ಟಿ, ವಿರೇಶ್ ಕಳಸಗೊಂಡ, ಉದಯ್ ಕೋಟ್ಯಾಳ, ಬಿ. ಎ. ಪಾಟೀಲ, ಶ್ರೀಶೈಲ ಬಬಲೇಶ್ವರ, ಪ್ರಕಾಶ ನಲವತ್ತವಾಡ, ಸಿದ್ದು ಬಿರಾದಾರ, ಸಿ. ಜಿ. ಹಾರಿವಾಳ, ಬೆನಕನಹಳ್ಳಿ ಹಾಗೂ ರಾಜ್ಯದ ಪದಾಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.

Share this